ಲಂಚ ಪಡೆದ ಆರೋಪ: ಐವರು ಸೇನಾಧಿಕಾರಿಗಳ ವಿರುದ್ಧ ಎಫ್‌ಐಆರ್‌

7

ಲಂಚ ಪಡೆದ ಆರೋಪ: ಐವರು ಸೇನಾಧಿಕಾರಿಗಳ ವಿರುದ್ಧ ಎಫ್‌ಐಆರ್‌

Published:
Updated:

ನವದೆಹಲಿ: ಸೈನಿಕರಿಗೆ ಪಡಿತರ ಪೂರೈಸುವ ಗುತ್ತಿಗೆದಾರನಿಂದ ಲಂಚ ಪಡೆದ ಆರೋಪದಲ್ಲಿ ಕರ್ನಲ್ ಸೇರಿದಂತೆ ಸೇನೆಯ ಐವರು ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಕರ್ನಲ್‌ ರಮಣ್‌ ದಹ್ದಾ, ಲೆಫ್ಟಿನೆಂಟ್‌ ಕರ್ನಲ್‌ ಮಹೇಂದ್ರ ಕುಮಾರ್‌, ಸುಬೇದಾರ್‌ ದೇವೇಂದ್ರ ಕುಮಾರ್‌, ಹವಾಲ್ದಾರ್‌ ಅಭಯ್‌ ಸಿಂಗ್‌, ಸುಬೇದಾರ್‌ ಸಾಹುರಾನ್‌ ಸಾಹು ಹಾಗೂ ಗುತ್ತಿಗೆದಾರ ಕೆ.ಕೆ. ಯಾಂಗ್‌ಫೊ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ರಮಣ್‌ ದಹ್ದಾ ಅವರು 556 ಆರ್ಮಿ ಸಪ್ಲೈ ಕೋರ್‌ನ ಕಮಾಂಡಿಂಗ್‌ ಅಧಿಕಾರಿಯಾಗಿದ್ದಾರೆ. ಮಹೇಂದ್ರ ಕುಮಾರ್‌ ಕುಮಾರ್‌ ಅವರು ಪ್ಲಾಟೂನ್‌ ಕಮಾಂಡರ್‌.

ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಸೈನಿಕರಿಗೆ ಪಡಿತರ ಪೂರೈಕೆ ಮಾಡುವ ಗುತ್ತಿಗೆದಾರನಿಂದ ಈ ಅಧಿಕಾರಿಗಳು ₹ 18 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಸೇನೆ ದೂರು ನೀಡಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !