ಮಂಗಳವಾರ, ನವೆಂಬರ್ 19, 2019
29 °C

ನೀಲಿಚಿತ್ರ ಹಂಚಿಕೆ: ಪ್ರಕರಣ ದಾಖಲು

Published:
Updated:

ನವದೆಹಲಿ: ಮಕ್ಕಳ ನೀಲಿಚಿತ್ರಗಳನ್ನು ಹಂಚಿಕೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ವಾಟ್ಸ್ಆ್ಯಪ್‌ ಗ್ರೂಪ್‌ನ ಸದಸ್ಯರಾಗಿದ್ದ ಏಳು ಜನರ ವಿರುದ್ಧ ಸಿಬಿಐ ಸೋಮವಾರ ಪ್ರಕರಣ ದಾಖಲಿಸಿದೆ.

ಪ್ರಾಥಮಿಕ ತನಿಖೆಯ ನಂತರ ಜರ್ಮನಿಯ ರಾಯಭಾರ ಕಚೇರಿಯು ಸಿಬಿಐನ ಅಂತರರಾಷ್ಟ್ರೀಯ ಪೊಲೀಸ್‌ ಸಹಕಾರ ಘಟಕಕ್ಕೆ (ಐಪಿಸಿಸಿ) ಜನವರಿ 31, 2019ಕ್ಕೆ ಸಲ್ಲಿಸಿದ ಪ್ರಾಥಮಿಕ ವರದಿ ಆಧರಿಸಿ ಕ್ರಮಕೈಗೊಳ್ಳಲಾಗಿದೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ನೀಲಿಚಿತ್ರಗಳ ವಿತರಣೆ ಅಪರಾಧಕ್ಕಾಗಿ ಜರ್ಮನಿಯಲ್ಲಿ ಐದು ವರ್ಷಗಳ ಸಜೆಗೆ ಒಳಗಾಗಿದ್ದ ಸಾಚೆ ಟ್ರೆಪ್ಕೆ ಎಂಬಾತನ ಬಗ್ಗೆ ಜರ್ಮನಿ ಮಾಹಿತಿ ನೀಡಿತ್ತು. ತನಿಖೆಯ ಕೈಗೊಂಡಾಗ ಆತ ಸದಸ್ಯನಾಗಿರುವ 29 ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿಯೂ ಮಕ್ಕಳ ನೀಲಿಚಿತ್ರ ಹಂಚಿಕೆ ಆಗಿರುವುದು ಪತ್ತೆಯಾಗಿತ್ತು.

ಪ್ರತಿಕ್ರಿಯಿಸಿ (+)