ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಗೆ ₹ 2.20 ಕೋಟಿ ವಂಚನೆ

Last Updated 4 ಜೂನ್ 2019, 19:09 IST
ಅಕ್ಷರ ಗಾತ್ರ

ನವದೆಹಲಿ: ನಕಲಿ ರಸೀದಿಗಳನ್ನು ಬಳಸಿ, ಸಿಕಂದರಾಬಾದ್‌ನ ಮೂರು ನಕಲಿ ಸಂಸ್ಥೆಗಳಿಗೆರೈಲ್ವೆ ಖಾತೆಯಿಂದ ₹2.20 ಕೋಟಿ ಅಕ್ರಮವಾಗಿ ವರ್ಗಾವಣೆಯಾಗಿರುವ ಹಗರಣ ಕುರಿತು ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಈ ಪ್ರಕರಣ ಸಂಬಂಧ ದಕ್ಷಿಣ ಕೇಂದ್ರ ರೈಲ್ವೆಯ ವೆಚ್ಚ ವಿಭಾಗದ ಲೆಕ್ಕ ಸಹಾಯಕ ವಿ. ಗಣೇಶ್‌ ಕುಮಾರ್ ಈಗಾಗಲೇ ಅಮಾನತುಗೊಂಡಿದ್ದಾರೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಗಣೇಶ್‌, ನಕಲಿ ಸಂಸ್ಥೆಗಳಾದ ‘ಸಾಯಿ ಬಾಲಾಜಿ ಫಾರ್ಮಾ ಅಂಡ್‌ ಸರ್ಜಿಕಲ್‌’, ‘ವಿನಾಯಕ ಏಜೆನ್ಸಿ’ ಹಾಗೂ ‘ಶ್ರೀ ತಿರುಮಲಾ ಎಂಟರ್‌ಪ್ರೈಸಸ್‌’ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿ, ತನಿಖೆ ಆರಂಭಿಸಿದೆ.

2018ರ ಅಕ್ಟೋಬರ್‌ನಿಂದ 2019ರ ಏಪ್ರಿಲ್‌ವರೆಗೂ ಜಿಎಸ್‌ಟಿ ನಂಬರ್‌ ಇಲ್ಲದ 31 ನಕಲಿ ರಸೀದಿಗಳಿಗೆ ರೈಲ್ವೆ ಇಲಾಖೆಯು ಹಣ ಬಿಡುಗಡೆ ಮಾಡಿದೆ ಎಂಬ ಆರೋಪ ಇದೆ. ಗಣೇಶ್‌ ಕುಮಾರ್‌ ಮತ್ತು ಇಲಾಖೆಯ ಕೆಲವರು ಪಿತೂರಿ ನಡೆಸಿ ನಕಲಿ ರಸೀದಿಗಳನ್ನು ಸೃಷ್ಟಿಸಿರುವುದರ ಜತೆಗೆ, ಅವುಗಳಿಗೆ ಹಣ ಬಿಡುಗಡೆಯಾಗುವಂತೆ ನೋಡಿಕೊಂಡಿದ್ದಾರೆ. ಈ ನಕಲಿ ಸಂಸ್ಥೆಗಳು ಆ್ಯಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಹಣ ಅಲ್ಲಿಗೆ ಜಮೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT