ದಾಭೋಲ್ಕರ್‌ ಹತ್ಯೆ ಆರೋಪಿಗಳ ವಿರುದ್ಧ ಭಯೋತ್ಪಾದಕ ಕೃತ್ಯ ಕಾಯ್ದೆ

7

ದಾಭೋಲ್ಕರ್‌ ಹತ್ಯೆ ಆರೋಪಿಗಳ ವಿರುದ್ಧ ಭಯೋತ್ಪಾದಕ ಕೃತ್ಯ ಕಾಯ್ದೆ

Published:
Updated:
Deccan Herald

ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿರುವ ಆರು ಆರೋಪಿಗಳ ವಿರುದ್ಧ ಭಯೋತ್ಪಾದನೆ ಕೃತ್ಯಕ್ಕೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಜಾರಿಗೊಳಿಸಲಾಗಿದೆ.

ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್‌ 15 ಮತ್ತು 16 (ಭಯೋತ್ಪಾದನೆ ಕೃತ್ಯ)  ಜಾರಿಗೊಳಿಸಲಾಗಿದೆ ಎಂದು ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಎಸ್‌.ಎಂ.ಎ. ಸಯ್ಯದ್‌ ಅವರಿಗೆ ಸಿಬಿಐ ತಿಳಿಸಿದೆ.

ದಾಭೋಲ್ಕರ್‌ ಹತ್ಯೆಗೆ ಸಂಬಂಧಿಸಿದಂತೆ ಹಿಂದೂ ಜನಜಾಗೃತಿ ಸಮಿತಿ ಸದಸ್ಯ ವಿರೇಂದ್ರಸಿಂಹ ತಾವ್ಡೆ, ಸಚಿನ್‌ ಅಂಧುರೆ, ಶರದ್‌ ಕಳಾಸ್ಕರ್‌, ರಾಜೇಶ್‌ ಬಂಗೇರಾ, ಅಮೋಲ್‌ ಕಾಳೆ, ಅಮಿತ್‌ ದೆಗ್ವೇಕರ್‌ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !