ರಾಜೀವ್‌ ಜತೆ ಟಿಎಂಸಿ ಮಾಜಿ ಸಂಸದನ ವಿಚಾರಣೆ

7
ಶಾರದಾ ಚಿಟ್‌ಫಂಡ್‌ ಹಗರಣ

ರಾಜೀವ್‌ ಜತೆ ಟಿಎಂಸಿ ಮಾಜಿ ಸಂಸದನ ವಿಚಾರಣೆ

Published:
Updated:

ಶಿಲಾಂಗ್‌ : ಶಾರದಾ ಚಿಟ್‌ಫಂಡ್‌ ಹಗರಣದ ಸಂಬಂಧ ಸಿಬಿಐ ಅಧಿಕಾರಿಗಳು, ಕೋಲ್ಕತ್ತ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರ ವಿಚಾರಣೆಯನ್ನು ಎರಡನೇ ದಿನವಾದ ಭಾನುವಾರವೂ ಮುಂದುವರಿಸಿದ್ದಾರೆ. 

ತೃಣಮೂಲ ಕಾಂಗ್ರೆಸ್‌ ಮಾಜಿ ಸಂಸದ ಕುನಾಲ್‌ ಘೋಷ್‌ ಅವರನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು. ಓಕ್‌ಲ್ಯಾಂಡ್‌ ಪ್ರದೇಶದಲ್ಲಿರುವ ಸಿಬಿಐ ಕಚೇರಿಗೆ ತೆರಳುವ ಮುನ್ನ ಅವರು ಸಮೀಪದಲ್ಲಿದ್ದ ಸರಸ್ವತಿ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ಕುನಾಲ್‌ ಅವರನ್ನು 2013ರಲ್ಲಿ ಬಂಧಿಸಲಾಗಿತ್ತು. 2016ರಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ರಾಜೀವ್‌ ಕುಮಾರ್‌ ಅವರನ್ನು ಶನಿವಾರ 9 ತಾಸು ವಿಚಾರಣೆ ನಡೆಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !