ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖನ್‌ಗಾಗಿ ಮತಕ್ಷೇತ್ರ ತ್ಯಾಗಕ್ಕೂ ಸಿದ್ಧ: ರಮೇಶ ಜಾರಕಿಹೊಳಿ

Last Updated 5 ಏಪ್ರಿಲ್ 2018, 6:13 IST
ಅಕ್ಷರ ಗಾತ್ರ

ಗೋಕಾಕ: ‘ಗುಜರಾತ ಮೂಲದ ಅಮಿತ ಶಾ ಅಂದರೆ ಯಾರು? ಎಂದು ಅರಿತಿರುವ ಕರ್ನಾಟಕದ ಜನ ಚುನಾವಣಾ ಫಲಿತಾಂಶದ ಮೂಲಕ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಸಹಕಾರ ಸಚಿವರ ರಮೇಶ ಜಾರಕಿಹೊಳಿ ಕುಟುಕಿದರು.ಬುಧವಾರ ಗೋಕಾಕದಲ್ಲಿ ನಡೆದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ  ಮಾತನಾಡಿದ ಅವರು, 2019ರ ಲೋಕಸಭೆ ಚುನವಾಣೆ ಬಳಿಕ ಪ್ರಧಾನಿ ಮೋದಿ ಎಂದರೆ ಯಾರು? ಎಂದು ದೇಶಕ್ಕೆ ತಿಳಿಯಲಿದೆ’ ಎಂದು ವಾಗ್ದಾಳಿ ನಡೆಸಿದರು.

‘ಗೋಕಾಕ ನಗರದಾದ್ಯಂತ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದು, ಈ ಬಾರಿ ಮತದಾರರು ನನ್ನನ್ನು ಬೆಂಬಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 126ರಿಂದ 130 ಸ್ಥಾನ, ಬಿಜೆಪಿ 80ರ ಆಸುಪಾಸು ಹಾಗೂ ಜೆಡಿಎಸ್ 18ರ ಆಸುಪಾಸು ಸ್ಥಾನ ಗೆಲ್ಲಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರ ತ್ಯಾಗಕ್ಕೂ ಸಿದ್ಧ: ‘ನಾನು ಮತ್ತು ಸಹೋದರಾದ ಶಾಸಕ ಸತೀಶ  ಹಾಗೂ ಲಖನ್‌ ನಡುವಿನ ರಾಜಕೀಯ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಸ್ಪರ್ಧೆಗೆ ಸನ್ನದ್ಧರಾಗಿದ್ದೇವೆ ಎಂದು ಹೇಳಿದ ಸಚಿವ ರಮೇಶ ಅವರು, ಅಗತ್ಯ ಬಿದ್ದರೆ ಕಿರಿಯ ಸಹೋದರ ಲಖನ್‌ಗಾಗಿ ಗೋಕಾಕ ಮತಕ್ಷೇತ್ರ ಬಿಟ್ಟುಕೊಡಲು ಸಿದ್ಧನಿದ್ದೇನೆ ’ ಎಂದು ಪುನರುಚ್ಛರಿಸಿದರು.ಬಿಜೆಪಿ ಈ ದೇಶವನ್ನು ಲೂಟಿ ಮಾಡುತ್ತಿರುವ ಅದಾನಿ, ನೀರವ ಮೋದಿ, ವಿಜಯ ಮಲ್ಯ, ಅಮಿತ ಶಾ ಪುತ್ರ, ರಾಮದೇವ ಬಾಬಾ ಅವರಂಥವರನ್ನು ಬೆನ್ನಿಗೆ ಕಟ್ಟಿಕೊಂಡು ಅಭಿವೃದ್ಧಿಯ ಮಾತುಗಳನ್ನು ಆಡುತ್ತಿದೆ’ ಎಂದರು.

ನಾಮ ಪತ್ರ ಸಲ್ಲಿಕೆ: ಇಷ್ಟರಲ್ಲೆ ನಾನು ನಾಮಪತ್ರ ಸಲ್ಲಿಸುವ ದಿನಾಂಕವನ್ನು ಅತಿಂಮಗೊಳಿಸಿ ಕನಿಷ್ಠ 1 ಲಕ್ಷ ಮತದಾರರನ್ನು ಸೇರಿಸಿ ಅವರ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸುವುದಾಗಿ ಪ್ರಕಟಿಸಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಘಟಪ್ರಭಾದ ರಾಮಣ್ಣ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT