ಬೆಂಗಳೂರು ಸುರಕ್ಷತೆಗೆ ಕೇಂದ್ರದಿಂದ ₹667 ಕೋಟಿ

7

ಬೆಂಗಳೂರು ಸುರಕ್ಷತೆಗೆ ಕೇಂದ್ರದಿಂದ ₹667 ಕೋಟಿ

Published:
Updated:

ನವದೆಹಲಿ: ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳನ್ನು ಕೈಗೊಳ್ಳಲು ಬೆಂಗಳೂರು ಸೇರಿದಂತೆ ದೇಶದ 8 ನಗರಗಳಿಗೆ ₹2,919 ಕೋಟಿಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್‌, ಕೋಲ್ಕತ್ತ, ಹೈದರಾಬಾದ್‌ ಮತ್ತು ಲಖನೌ ನಗರಗಳಿಗೆ ಈ ಅನುದಾನ ದೊರೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವ ವಿರೇಂದ್ರ ಕುಮಾರ್‌ ಲೋಕಸಭೆಯಲ್ಲಿ ಶುಕ್ರವಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುರಕ್ಷತಾ ವ್ಯವಸ್ಥೆ ಸುಧಾರಿಸಲು ₹667 ಕೋಟಿ ಮೀಸಲಿಡಲು ನಿರ್ಧರಿಸಲಾಗಿದೆ.

ಈ ಅನುದಾನದಲ್ಲಿ ಸಾರ್ವಜನಿಕ ಸ್ಥಳಗಳ ನಿಗಾವಹಿಸುವ ವ್ಯವಸ್ಥೆ ಕಲ್ಪಿಸಲು, ಕ್ಷಿಪ್ರ ಕಾರ್ಯಪಡೆಯ ಪೊಲೀಸ್‌ ವಾಹನಗಳಿಗೆ, ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ‘ಹೆಲ್ಪ್‌ ಡೆಸ್ಕ್’ಗೆ ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತರನ್ನು ನಿಯೋಜಿಸಲು ಹಾಗೂ ಶಾಲೆ, ಕಾಲೇಜು ಮತ್ತು ಬಸ್‌ ನಿಲ್ದಾಣಗಳ ಬಳಿ ಮಹಿಳಾ ಪೊಲೀಸ್‌ ಹೊರಠಾಣೆಗಳನ್ನು ಸ್ಥಾಪಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !