ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕೊರೊನಾ: ಸೋಂಕು ತಗುಲಿದವರಲ್ಲಿ 21 ರಿಂದ 40 ವರ್ಷದವರೇ ಹೆಚ್ಚು

Last Updated 5 ಏಪ್ರಿಲ್ 2020, 8:28 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಇದುವರೆಗೆ ಕೊರೊನಾ ಸೋಂಕು ಪತ್ತೆಯಾಗಿರುವವರಲ್ಲಿ ಶೇ. 42ರಷ್ಟು21 ರಿಂದ 40 ವರ್ಷದೊಳಗಿನ ವಯಸ್ಸಿನವರು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವರದಿ ತಿಳಿಸಿದೆ.

ಶೇ.9ರಷ್ಟು ಮಂದಿ 0-20 ವಯಸ್ಸಿನ ಅಂತರದಲ್ಲಿದ್ದರೆ, ಶೇ.33ರಷ್ಟು 41 ರಿಂದ 60 ವರ್ಷ ವಯಸ್ಸಿನವರು. ಶೇ.17ರಷ್ಟು ಮಂದಿ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರುಎಂದು ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್ ತಿಳಿಸಿದ್ದಾರೆ.

ಇದುವರೆಗೆ ತಬ್ಲಿಗಿ ಜಮಾತ್ ನಲ್ಲಿ ಭಾಗವಹಿಸಿದ್ದವರು ದೇಶದ 17 ರಾಜ್ಯಗಳಲ್ಲಿ ಕಂಡುಬಂದಿದ್ದಾರೆ. ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 1,023 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ಇಡೀ ದೇಶದ ಒಟ್ಟು ಪ್ರಕರಣಗಳಲ್ಲಿ ಶೇ.30ರಷ್ಟು ಕಾರ್ಯಕ್ರಮ ನಡೆದ ಒಂದೇಸ್ಥಳದಿಂದ ಸೃಷ್ಟಿಯಾಗಿವೆಎಂದು ಅಗರವಾಲ್ ತಿಳಿಸಿದ್ದಾರೆ.ತಬ್ಲಿಗಿ ಜಮಾತ್‌‌ನಲ್ಲಿ ಪಾಲ್ಗೊಂಡಿದ್ದ 22ಸಾವಿರ ಮಂದಿಯನ್ನು ದೇಶದ ವಿವಿದೆಡೆಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಗೃಹ ಇಲಾಖೆಯ ಪುಣ್ಯ ಸಲಿಲ ಶ್ರೀವಾಸ್ತವ ತಿಳಿಸಿದ್ದಾರೆ.

ರಾಷ್ಟ್ರದಲ್ಲಿ ಇದುವರೆಗೆ 77 ಮಂದಿ ಮೃತಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 472 ಕೊರೊನಾ ಪ್ರಕರಣಗಳು ವರದಿಯಾಗಿವೆ. ರಾಷ್ಟ್ರದಲ್ಲಿ ಇದುವರೆಗೆ ಕೊರೊನಾ ಸೋಂಕಿತರ ಸಂಖ್ಯೆ 3,374 ಎಂದು ಸಲಿಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT