ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಧೂರಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ

Last Updated 25 ಮೇ 2018, 5:21 IST
ಅಕ್ಷರ ಗಾತ್ರ

ಕವಿತಾಳ: ಸಮೀಪದ ಬಸಾಪುರ ಗ್ರಾಮದಲ್ಲಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಗುರುವಾರ ಅದ್ಧೂರಿಯಾಗಿ  ಜರುಗಿತು.

ಇಲ್ಲಿನ ಸರ್ಕಾರಿ ಶಾಲೆಯಿಂದ ದೇವಸ್ಥಾನದವರೆಗೆ ಕುಂಭ, ಕಳಸ, ನಂದಿಕೋಲು ಸಮೇತ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಮುತ್ತೈದೆಯರು ಪಾಲ್ಗೊಂಡಿದ್ದರು.

ಗುಂಡಸಾಗರ ಗ್ರಾಮದ ಮೌನೇಶ ಮತ್ತು ತಂಡದವರು ನಡೆಸಿದ ಪುರವಂತಿಕೆ, ವೀರಗಾಸೆ, ನಂದಿಕೋಲು ಕುಣಿತ, ಮತ್ತು ಡೊಳ್ಳು ಕುಣಿತ ಆಕರ್ಷಿಸಿದವು. ಉತ್ಸವದ ನಿಮಿತ್ತ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಎಲೆ ಪೂಜೆ ಸೇರಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಶೇಖರಯ್ಯ ಸ್ವಾಮಿ, ಮಲ್ಲಯ್ಯಸ್ವಾಮಿ, ಗುಂಡಯ್ಯಸ್ವಾಮಿ, ಸಣ್ಣಮರಪ್ಪ ಸಜ್ಜನ, ತಾಲ್ಲೂಕು ಪಂಚಾಯಿತಿ ಸದಸ್ಯ ಶಿವಕುಮಾರ ಮಿಟ್ಟಿಮನಿ, ವೆಂಕಟನಗೌಡ ಮಿಟ್ಟಿಮನಿ, ಬಸನಗೌಡ ಬಾಲರಡ್ಡಿ, ಮಲ್ಲಿಕಾರ್ಜುನ, ಬಸವರಾಜ, ಆದನಗೌಡ ಪಾಟೀಲ, ಚನ್ನಪ್ಪಗೌಡ, ಶರಣಪ್ಪ ಬುದ್ದಿನ್ನಿ, ಹುಚ್ಚಪ್ಪ ಮಡಿವಾಳ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT