ಸೋಮವಾರ, ಆಗಸ್ಟ್ 2, 2021
28 °C

ಸಂರಕ್ಷಿತ 820 ಆರಾಧನಾ ಸ್ಥಳಗಳಿಗೆ ಇಂದಿನಿಂದ ಪ್ರವೇಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ (ಎಎಸ್‌ಐ) ನಿರ್ವಹಣೆಯಲ್ಲಿರುವ, 820 ಸಂರಕ್ಷಿತ ಆರಾಧನಾ ಸ್ಥಳಗಳನ್ನು ಸೋಮವಾರದಿಂದ ತೆರೆಯಲು ಅನುಮತಿ ನೀಡಲಾಗಿದೆ’ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್‌ ಪಟೇಲ್‌ ತಿಳಿಸಿದ್ದಾರೆ.

ಒಟ್ಟು 3691 ಸಂರಕ್ಷಿತ ಸ್ಮಾರಕಗಳನ್ನು ಎಎಸ್‌ಐ ನಿರ್ವಹಿಸುತ್ತಿದೆ. ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಿದ್ದರಿಂದ ಮಾರ್ಚ್‌ 17ರಿಂದ ಇವೆಲ್ಲವುಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ನೀಲಾ ಮಸೀದಿ, ಲಾಲ್‌ ಗುಂಬಜ್‌ನಂಥ ಧಾರ್ಮಿಕ ಚಟುವಟಿಕೆಗಳು ನಡೆಯುವ, ಸಂರಕ್ಷಿತ ಆರಾಧನಾ ಸ್ಥಳಗಳನ್ನು ಮಾತ್ರ ಸೋಮವಾರದಿಂದ ತೆರೆಯಲಾಗುವುದು. ಆದರೆ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರವಾಗಿರುವುದರಿಂದ ಅಲ್ಲಿನ 65 ಸ್ಮಾರಕಗಳು ತೆರೆಯುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಸುರಕ್ಷತಾ ಕ್ರಮವನ್ನು ಸ್ಮಾರಕಗಳ ಅಧಿಕಾರಿಗಳು ಅನುಸರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ತಾಣಗಳಿಗೆ ಭೇಟಿ ನಿಡುವ ಪ್ರವಾಸಿಗರು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸುವ ನಿಯಮ ಜಾರಿಯಾಗಬಹುದು ಎಂದು ಎಎಸ್‌ಐ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು