ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 19: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಪ್ಯಾಕೇಜ್‌ 

Last Updated 9 ಏಪ್ರಿಲ್ 2020, 8:31 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌-19 ವಿರುದ್ಧದ ತುರ್ತು ಸ್ಪಂದನೆ ಮತ್ತು ಆರೋಗ್ಯ ವ್ಯವಸ್ಥೆ ಬಲವರ್ಧನೆ ಮತ್ತು ಸಿದ್ಧತೆಯ ಉದ್ದೇಶದ ಪ್ಯಾಕೇಜ್‌ಗೆ ಕೇಂದ್ರ ಸರ್ಕಾರ ಗುರುವಾರ ಒಪ್ಪಿಗೆ ನೀಡಿದೆ.

ರಾಷ್ಟ್ರೀಯ ಆರೋಗ್ಯ ಆಯೋಗದ ಅಡಿಯಲ್ಲಿ ಈ ಪ್ಯಾಕೇಜ್‌ಗೆ ಅನುಮೋದನೆ ನೀಡಲಾಗಿದೆ. ಪ್ಯಾಕೇಜ್‌ನ ಅಡಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೂರು ಹಂತಗಳಲ್ಲಿ ಅನುಧಾನ ನೀಡಲಿದೆ.

ಈ ಪ್ಯಾಕೇಜ್‌ ಮೂಲಕ ಜನವರಿ 2020ರಿಂದ–ಮಾರ್ಚ್‌ 2024ರ ವರೆಗೆ ಮೂರು ಹಂತದಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ. (ಹಂತ–1: 2020ರ ಜನವರಿಯಿಂದ 2020ರ ಜೂನ್‌, ಹಂತ–2: 2020ರ ಜುಲೈನಿಂದ 2021ರ ಮಾರ್ಚ್‌, ಹಂತ–3: 2021ರ ಏಪ್ರಿಲ್‌ ನಿಂದ 2024ರ ಮಾರ್ಚ್‌ ವರೆಗೆ)

ಕೋವಿಡ್‌ ವಿರುದ್ಧ ತುರ್ತು ಸ್ಪಂದನೆ, ರಾಷ್ಟ್ರ ಮತ್ತು ರಾಜ್ಯಗಳ ಆರೋಗ್ಯ ವ್ಯವಸ್ಥೆ ಬಲಪಡಿಸುವುದು, ಅಗತ್ಯ ವೈದ್ಯಕೀಯ ಉಪಕರಣ, ಔಷಧದ ಸಂಗ್ರಹಣೆ, ಪ್ರಯೋಗಾಲಯಗಳ ಸ್ಥಾಪನೆ ಮತ್ತು ಜೈವಿಕ ಭದ್ರತಾ ಸಿದ್ಧತೆ ಸೇರಿದಂತೆ ಕಣ್ಗಾವಲು ಚಟುವಟಿಕೆಗಳನ್ನು ಬಲಪಡಿಸುವುದು ಇದರ ಮೂಲ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT