ಬುಧವಾರ, ಸೆಪ್ಟೆಂಬರ್ 18, 2019
25 °C

ದೆಹಲಿಯಲ್ಲಿ ಹೆಚ್ಚುತ್ತಿರುವ ಸರ ಕಳ್ಳರು, ಗೃಹಿಣಿಯರು ಕಂಗಾಲು

Published:
Updated:

ದೆಹಲಿ: ಮಗುವಿನೊಂದಿಗೆ ನಡೆದು ಹೋಗುತ್ತಿದ್ದ ಗೃಹಿಣಿಯ ಸರ ಅಪಹರಿಸಿರುವ ಘಟನೆ ದೆಹಲಿಯಲ್ಲಿ ಶುಕ್ರವಾರ ನಡೆದಿದೆ. ಪದೇ ಪದೇ ನಡೆಯುತ್ತಿರುವ ಸರ ಅಪಹರಣ ಪ್ರಕರಣಗಳಿಂದಾಗಿ ದೆಹಲಿಯಲ್ಲಿ ಗೃಹಿಣಿಯರು ಮನೆಯಿಂದ ಹೊರಗೆ ಕಾಲಿಡಲು ಭಯಪಡುವಂತಾಗಿದೆ.

ಮಹಿಳೆ ನಡೆದು ಹೋಗುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಸವಾರರು ಮಹಿಳೆಯ ಬಳಿ ಸರ ಇರುವುದನ್ನು ಗಮನಿಸಿದ್ದಾರೆ. ನಂತರ ಸ್ವಲ್ಪ ದೂರ ಹೋಗಿ ಮತ್ತೆ ವಾಪಸಾಗಿ ಸರ ಅಪಹರಿಸಿ ಪರಾರಿಯಾಗಿದ್ದಾರೆ. ಮಹಿಳೆಯು ಮಗುವನ್ನು ಬಿಟ್ಟು ಸವಾರನನ್ನು ಹಿಡಿಯಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. 

ಇತ್ತೀಚೆಗಷ್ಟೇ ಮಗಳ ಜೊತೆ ಹೋಗುತ್ತಿದ್ದ ಮಹಿಳೆಯ ಬಳಿ ಸರ ಅಪಹರಣ ಮಾಡಿದ ವ್ಯಕ್ತಿಯನ್ನು ದೆಹಲಿಯ ನಂಗ್ಲೊಯ್ ಪ್ರದೇಶದ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆಗಸ್ಟ್ 30ರಂದು ಈ ಘಟನೆ ನಡೆದಿತ್ತು. ಸೆಪ್ಟೆಂಬರ್ 6ರಂದು ಮತ್ತೊಂದು ಸರ ಅಪಹರಣ ಪ್ರಕರಣ ನಡೆದಿದೆ. 

ಇದರಿಂದಾಗಿ ಮಹಿಳೆಯರು ಕಂಗಾಲಾಗಿದ್ದು, ಆಭರಣ ಧರಿಸಲು ಭಯಪಡುವಂತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಚಾವ್ಲಾ ಪ್ರದೇಶದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

 

Post Comments (+)