ತಿರುಪತಿ ದೇವಸ್ಥಾನ ಬಂದ್ ನಿರ್ಧಾರ ವಾಪಸ್‌ಗೆ ಚಂದ್ರಬಾಬು ನಾಯ್ಡು ಸೂಚನೆ

7

ತಿರುಪತಿ ದೇವಸ್ಥಾನ ಬಂದ್ ನಿರ್ಧಾರ ವಾಪಸ್‌ಗೆ ಚಂದ್ರಬಾಬು ನಾಯ್ಡು ಸೂಚನೆ

Published:
Updated:

ಹೈದರಾಬಾದ್: ದೇವಸ್ಥಾನ ಶುಚಿಗೊಳಿಸುವ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಆಗಸ್ಟ್ 9ರಿಂದ 16ರವರೆಗೆ ತಿರುಪತಿ ತಿರುಮಲ ದೇವಸ್ಥಾನವನ್ನು ಬಂದ್ ಮಾಡುವ ನಿರ್ಧಾರವನ್ನು ಹಿಂಪಡೆಯಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೂಚಿಸಿದ್ದಾರೆ. 

ಜುಲೈ 24ರಂದು ನಡೆಯುವ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ (ಟಿಟಿಡಿ) ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ. 

ಅಷ್ಟಬಂಧನ ಬಾಲಾಲಯ ಮಹಾ ಸಂಪ್ರೋಕ್ಷಣಮ್ ಎಂಬ ಧಾರ್ಮಿಕ ಆಚರಣೆಯನ್ನು 12 ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. ಈ ವೇಳೆ ಭಕ್ತರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲು ಟಿಟಿಡಿ ನಿರ್ಧರಿಸಿತ್ತು. ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿದ ನಾಯ್ಡು, ನಿತ್ಯ 25ರಿಂದ 30 ಸಾವಿರ ಭಕ್ತರಿಗಾದರೂ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದಾರೆ. 

ಮಂಡಳಿಯು ಅನವಶ್ಯಕವಾಗಿ ವಿವಾದದಲ್ಲಿ ಸಿಲುಕೊಳ್ಳುವುದು ಬೇಡ ಎಂದಿರುವ ನಾಯ್ಡು, ಮುಂಗಡವಾಗಿ ಟಿಕೆಟ್ ಖರೀದಿಸಿದ ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !