ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ 2 ನೇರ ವೀಕ್ಷಣೆಗೆ ಅವಕಾಶ

Last Updated 21 ಜುಲೈ 2019, 3:56 IST
ಅಕ್ಷರ ಗಾತ್ರ

ಬೆಂಗಳೂರು:ಬಹುನಿರೀಕ್ಷಿತ ಚಂದ್ರಯಾನ 2 ಉಡಾವಣೆಯನ್ನು ನೀವೂ ನೇರ ವೀಕ್ಷಣೆಯ ಮೂಲಕ ಕಣ್ತುಂಬಿಕೊಳ್ಳಬಹುದು.

‘ಶ್ರೀಹರಿಕೋಟದ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದವೀಕ್ಷಕರ ಗ್ಯಾಲರಿ ಮೂಲಕ ಚಂದ್ರಯಾನ 2 ನೇರ ವೀಕ್ಷಣೆಗೆಆನ್‌ಲೈನ್ ನೋಂದಣಿ ಜುಲೈ 19ರ ಸಂಜೆ 6 ಗಂಟೆಯಿಂದ ಆರಂಭವಾಗುತ್ತದೆ’ ಎಂದು ಇಸ್ರೋ ಟ್ವೀಟ್ ಮಾಡಿದೆ.

ಟ್ವೀಟ್‌ನಲ್ಲಿಯೇ ನಮೂದಿಸಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ಆಸಕ್ತರು ತಮ್ಮ ವಿವರ ನೀಡಬಹುದು. ಆದರೆ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ‘ನೋಂದಣಿ ಅವಧಿ ಮುಗಿದಿದೆ’ ಎಂದು ಹೇಳಿದ್ದಾರೆ. ಅದಕ್ಕೆ ‘ನಾಳೆ ಶುರುವಾಗುತ್ತೆ ನೋಡಿ ಸ್ವಾಮಿ’ ಎಂದು ಹಲವರುಮಾರ್ನುಡಿದಿದ್ದಾರೆ.

ನಿಮಗೂ ಚಂದ್ರಯಾನ 2 ನೇರವಾಗಿ ಕಣ್ತುಂಬಿಕೊಳ್ಳುವ ಆಸಕ್ತಿಯಿದ್ದರೆ ನಾಳೆ ಸಂಜೆ 6 ಗಂಟೆಗೆhttps://www.shar.gov.in/VSCREGISTRATION/index.jspವೆಬ್‌ಸೈಟ್‌ನಲ್ಲಿ ನಿಮ್ಮ ವಿವರ ನೀಡಿ ನೋಂದಣಿ ಮಾಡಿಕೊಳ್ಳಿ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT