ಚಂದ್ರಯಾನ–2 ಮತ್ತಷ್ಟು ವಿಳಂಬ

7
ಎರಡನೇ ಬಾರಿಯೂ ಉಡಾವಣೆ ಮುಂದೂಡಿಕೆ

ಚಂದ್ರಯಾನ–2 ಮತ್ತಷ್ಟು ವಿಳಂಬ

Published:
Updated:

ನವದೆಹಲಿ (ಪಿಟಿಐ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷೆಯ ಯೋಜನೆ ‘ಚಂದ್ರಯಾನ–2’ ಮತ್ತಷ್ಟು ವಿಳಂಬವಾಗಲಿದೆ.

ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲೇ ಇಸ್ರೊವಿನ ಎರಡು ಯೋಜನೆಗಳು ವಿಫಲವಾಗಿದ್ದವು. ಯಶಸ್ವಿಯಾಗಿ ಕಕ್ಷೆ ಸೇರಿದ್ದರೂ ಜಿಸ್ಯಾಟ್–6ಎ ಉಪಗ್ರಹವು ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡಿತ್ತು. ಐಆರ್‌ಎನ್‌ಎಸ್‌–1ಎಚ್ ಉಪ್ರಹವನ್ನು ಹೊತ್ತಿದ್ದ ಪಿಎಸ್‌ಎಲ್‌ವಿಯ ಉಷ್ಣ ನಿರೋಧಕ ಕವಚ ತೆರೆದುಕೊಳ್ಳದೇ ಇದ್ದುದ್ದರಿಂದ, ಉಪಗ್ರಹ ಕಕ್ಷೆಗೇ ಸೇರಿರಲಿಲ್ಲ. ಇದರಿಂದ ಇಸ್ರೊ ತೀವ್ರ ಹಿನ್ನಡೆ ಅನುಭವಿಸಿತ್ತು. ಹೀಗಾಗಿ ಚಂದ್ರಯಾನ–2 ಯಾವುದೇ ರೀತಿಯಲ್ಲೂ ವಿಫಲವಾಗದಂತೆ ಎಚ್ಚರವಹಿಸಲಾಗುತ್ತಿದೆ. ಹೀಗಾಗಿ ಉಡಾವಣೆ ವಿಳಂಬವಾಗುತ್ತಿದೆ ಎಂದು ಇಸ್ರೊ ಮೂಲಗಳು ಹೇಳಿವೆ.

‘ಚಂದ್ರಯಾನ–1 ಮತ್ತು ಮಂಗಳಯಾನಗಳ ನಂತರ ಇದು ಅತ್ಯಂತ ಮಹತ್ವದ ಯೋಜನೆ. ಚಂದ್ರನ ಮೇಲೆ ಇದೇ ಮೊದಲ ಬಾರಿ ರೋವೆರ್‌  ನೌಕೆಯನ್ನು ಇಳಿಸಲಾಗುತ್ತಿದೆ. ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಈವರೆಗೆ ಸಂಶೋಧನೆಗಳು ನಡೆದಿಲ್ಲ. ಚಂದ್ರಯಾನ–2ರ ಗುರಿ ಚಂದ್ರನ ದಕ್ಷಿಣ ಧ್ರುವ. ಈ ಎಲ್ಲಾ ಕಾರಣಗಳಿಗಾಗಿ ಚಂದ್ರಯಾನ–2 ಅತ್ಯಂತ ಮಹತ್ವ ಪಡೆದಿದೆ. ಹೀಗಾಗಿ ಈ ಯೋಜನೆಯಲ್ಲಿ ಬಳಸಲಾಗುವ ಎಲ್ಲಾ ಉಪಕರಣ, ರಾಕೆಟ್ ಮತ್ತು ರೋವೆರ್‌ ಅನ್ನು ಮತ್ತಷ್ಟು ಕಠಿಣ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿಯೇ ಉಡಾವಣೆಯನ್ನು ಮತ್ತೆ ಮುಂದೂಡಲಾಗಿದೆ’ ಎಂದು ಇಸ್ರೊ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

 ಜನವರಿಯಲ್ಲಿ ಉಡಾವಣೆ

1. 2018ರ ಏಪ್ರಿಲ್‌ನಲ್ಲಿ ಉಡಾವಣೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಮುಂದೂಡಲಾಯಿತು

2. 2018ರ ಅಕ್ಟೋಬರ್–ನವೆಂಬರ್‌ನಲ್ಲಿ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಎರಡನೇ ಸುತ್ತಿನ ಪರೀಕ್ಷೆಗಳ ಕಾರಣ ಮುಂದೂಡಲಾಗಿದೆ

3. 2019ರ ಜನವರಿಯಲ್ಲಿ ಉಡಾವಣೆ ಮಾಡಲು ಚಿಂತಿಸಲಾಗಿದೆ. ಆದರೆ ಇನ್ನೂ ನಿರ್ಧಾರ ಅಂತಿಮವಾಗಿಲ್ಲ

 

* ₹ 800 ಕೋಟಿ: ಚಂದ್ರಯಾನ–2ರ ಅಂದಾಜು ವೆಚ್ಚ

 ***

* ಭಾರತವು ಇದೇ ಮೋದಲ ಬಾರಿ ಚಂದ್ರನ ಮೇಲೆ ರೋವೆರ್‌ ನೌಕೆ ಇಳಿಸಲಿರುವ ಯೋಜನೆಯಿದು

* ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಈ ಯೋಜನೆಯಲ್ಲಿ ಸಂಶೋಧನೆ ನಡೆಸಲಾಗುತ್ತದೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !