ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘97 ವಿಮಾನಗಳಲ್ಲಿನ ಎಂಜಿನ್‌ ಬದಲಾಯಿಸಿ’

Last Updated 1 ನವೆಂಬರ್ 2019, 19:23 IST
ಅಕ್ಷರ ಗಾತ್ರ

ನವದೆಹಲಿ: 97 ಏರ್‌ಬಸ್‌ ಎ320 ನಿಯೋ ವಿಮಾನದಲ್ಲಿರುವಪ್ರಾಟ್‌ ಆ್ಯಂಡ್‌ ವಿಟ್ನಿ (ಪಿಡಬ್ಲ್ಯೂ) ಎಂಜಿನ್‌ಗಳನ್ನು ಬದಲಾಯಿಸಬೇಕು ಎಂದುನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇಂಡಿಗೋ ಸಂಸ್ಥೆಗೆ ಸೂಚಿಸಿದೆ.‌

‘ವಿಮಾನ ಹಾರಾಟ ಸಂದರ್ಭದಲ್ಲೇ ಎಂಜಿನ್‌ನಲ್ಲಿ ದೋಷಗಳು ಕಂಡುಬಂದಿದ್ದವು. ಇದೊಂದು ಗಂಭೀರ ವಿಷಯವಾಗಿದೆ. ಹೀಗಾಗಿಸಾಕಷ್ಟು ಚರ್ಚೆಯ ಬಳಿಕ ಎಂಜಿನ್‌ಗಳನ್ನು ಬದಲಾವಣೆಗೊಳಿಸಲೇಬೇಕು ಎನ್ನುವ ಆದೇಶ ನೀಡುವ ನಿರ್ಧಾರಕ್ಕೆ ಬರಲಾಗಿದೆ. 2020 ಜನವರಿ 31ರೊಳಗೆ ಎಲ್ಲ ಎಂಜಿನ್‌ಗಳನ್ನು ಬದಲಾಯಿಸಬೇಕು’ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.‌

ಸೋಮವಾರ ಇಂಡಿಗೋ ಹಾಗೂ ಗೋಏರ್‌ ಸಂಸ್ಥೆಯ 29 ಎ320ನಿಯೋ ವಿಮಾನದಲ್ಲಿರುವ ಪಿಡಬ್ಲ್ಯೂ ಎಂಜಿನ್‌ಗಳನ್ನು 15 ದಿನದೊಳಗಾಗಿ ಬದಲಾವಣೆಗೆ ಡಿಜಿಸಿಎ ಸೂಚಿಸಿತ್ತು. ನವೆಂಬರ್‌ 19ರೊಳಗೆ 23 ವಿಮಾನದಲ್ಲಿರುವ ಪಿಡ್ಬ್ಲ್ಯೂಎಂಜಿನ್‌ಗಳಲ್ಲಿ ಒಂದನ್ನಾದರೂ ಬದಲಾಯಿಸಬೇಕು ಎಂದು ಇಂಡಿಗೋಗೆ ಡಿಜಿಸಿಎ ಸೂಚಿಸಿದ್ದು, 2020 ಜನವರಿ 31ರೊಳಗೆ ಎ320ನಿಯೋ ಹಾಗೂ ಎ321ನಿಯೋ ವಿಮಾನದಲ್ಲಿನ ಎರಡೂ ಎಂಜಿನ್‌ಗಳ ಬದಲಾವಣೆಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT