7

ಶಾಲೆ ಬದಲಾಯಿಸಿದ್ದಕ್ಕೆ ‘ಜಗಳಗಂಟಿ’ ಪಟ್ಟ!

Published:
Updated:

ಲಖನೌ: ವಿದ್ಯಾರ್ಥಿನಿಯನ್ನು ಮತ್ತೊಂದು ಶಾಲೆಗೆ ದಾಖಲಿಸುವ ಪೋಷಕರ ನಿರ್ಧಾರದಿಂದ ಆಕ್ರೋಶಗೊಂಡ ಮುಖ್ಯೋಪಾಧ್ಯಾಯರು, ವರ್ಗಾವಣೆ ಪತ್ರದಲ್ಲಿನ (ಟಿ.ಸಿ) ನಡತೆ ಕಾಲಂನಲ್ಲಿ ‘ಜಗಳಗಂಟಿ’ ಎಂದು ನಮೂದಿಸಿದ್ದಾರೆ.

ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಬೇನಿಗಂಜ್‌ನ ಸಿಟಿ ಪಬ್ಲಿಕ್‌ ಶಾಲೆಯಲ್ಲಿ ಓದುತ್ತಿದ್ದ ಶಿಖಾ ಕುಮಾರ್‌, 8ರಿಂದ 9ನೇ ತರಗತಿಗೆ ಉತ್ತೀರ್ಣಳಾಗಿದ್ದಳು. ಆದರೆ ಆ ಶಾಲೆಯ ದುಬಾರಿ ಶುಲ್ಕ ಭರಿಸಲು ಸಾಧ್ಯವಾಗದೆ, ಕಡಿಮೆ ಶುಲ್ಕವಿರುವ ಬೇರೊಂದು ಶಾಲೆಗೆ ಆಕೆಯನ್ನು ಸೇರಿಸಲು ಅಜ್ಜ ಬಾಬು ರಾಮ್‌ ಮುಂದಾದರು.

ಆದರೆ, ತಮ್ಮ ಶಾಲೆಯಲ್ಲೇ ಮುಂದುವರಿಸುವಂತೆ ಮನವೊಲಿಸಲು ಮುಖ್ಯೋಪಾಧ್ಯಾಯರು ಯತ್ನಿಸಿದರು. ಸಾಧ್ಯವಾಗದಾಗ, ಆಕೆಗೆ ಬೇರೆ ಯಾವುದೇ ಶಾಲೆಯಲ್ಲಿ ಪ್ರವೇಶ ದೊರೆಯದಂತೆ ಮಾಡಲು ಟಿ.ಸಿ.ಯಲ್ಲಿ ಹೀಗೆ ನಮೂದಿಸಿದ್ದರು ಎನ್ನಲಾಗಿದೆ.

ಅನಕ್ಷರಸ್ಥ ಬಾಬು ರಾಮ್‌ಗೆ, ಮತ್ತೊಂದು ಶಾಲೆಯಲ್ಲಿ ಶಿಖಾಗೆ ಪ್ರವೇಶ ನಿರಾಕರಿಸಿದಾಗಷ್ಟೇ ವಿಷಯ ತಿಳಿದುಬಂತು. ಇದೀಗ ಅವರು ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ತನಿಖೆಗೆ ಆದೇಶಿಸಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !