ಭಾನುವಾರ, ಜುಲೈ 25, 2021
22 °C

ಜೂನ್‌ 30 ರವರೆಗೆ ಚಾರ್‌ಧಾಮ್‌ ಯಾತ್ರೆ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡೆಹ್ರಾಡೂನ್‌: ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ‘ಚಾರ್‌ಧಾಮ್‌’ ಯಾತ್ರೆಯನ್ನು ಜೂನ್ 30ರ ವರೆಗೆ ಆರಂಭಿಸದೇ ಇರಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸಿಇಒ ರವಿನಾಥ್‌ ರಾಮನ್‌ ಹೇಳಿದ್ದಾರೆ.

ಹಿಮಾಲಯ ತಪ್ಪಲಲ್ಲಿರುವ ಬದರಿನಾಥ, ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ಕ್ಷೇತ್ರಗಳನ್ನು ಒಟ್ಟುಗೂಡಿ ‘ಚಾರ್‌ಧಾಮ್‌’ ಎನ್ನಲಾಗುತ್ತದೆ. ಈ ದೇವಾಲಯಗಳು ತೆರೆದಿದ್ದು, ಭಕ್ತರಿಗೆ ಮಾತ್ರ ಪ್ರವೇಶ ನಿಷೇಧಿಸಲಾಗಿದೆ.

‘ಸೋಮವಾರ ನಡೆದ ಈ ದೇವಸ್ಥಾನಗಳ ಅರ್ಚಕರು, ಹಕ್ಕುದಾರರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಯಾತ್ರೆಯನ್ನು ಯಾವಾಗಿನಿಂದ ಆರಂಭಿಸಬೇಕು ಎಂಬ ಬಗ್ಗೆ ಜೂನ್‌ 30ರ ನಂತರವೇ ನಿರ್ಧರಿಸಲಾಗುವುದು’ ಎಂದು ರವಿನಾಥ್‌ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು