ಶನಿವಾರ, ನವೆಂಬರ್ 23, 2019
18 °C

ದಾಭೋಲ್ಕರ್ ಹತ್ಯೆ: 2 ತಿಂಗಳಲ್ಲಿ ಆರೋಪಪಟ್ಟಿ

Published:
Updated:

ಮುಂಬೈ: ದಾಭೋಲ್ಕರ್ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಒಂದು ತಿಂಗಳಲ್ಲಿ ದೋಷಾರೋಪ ಪಟ್ಟಿ ದಾಖಲಿಸಲಾಗುವುದು ಎಂದು ಸಿಬಿಐ ಸೋಮವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿತು.

ವಕೀಲ ಸಂಜೀವ್‌ ಪುನಲೇಕರ್‌ ಮತ್ತು ಅವರ ಸಹಾಯಕ ವಿಕ್ರಮ್‌ ಭಾವೆ ವಿರುದ್ದ ತಿಂಗಳಲ್ಲಿ ಆರೋಪಪಟ್ಟಿ ದಾಖಲಿಸಲಾಗುವುದು ಎಂದು ಸಿಬಿಐ ಪರ ವಕೀಲ ಅನಿಲ್‌ ಸಿಂಗ್‌ ಕೋರ್ಟ್‌ಗೆ ತಿಳಿಸಿದರು.

ಹತ್ಯೆಯ ಆರೋಪಿ ಶರದ್ ಕಲಸ್ಕರ್ ಅವರಿಗೆ ಪುನಲೇಕರ್ ನೆರವು ನೀಡಿದ್ದು, ಕೃತ್ಯಕ್ಕೆ ಬಳಸಿದ್ದ ಗನ್‌ ನಾಶಪ ಡಿಸಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಹತ್ಯೆ ನಡೆದಿದ್ದ ಸ್ಥಳದ ಪರಿಶೀಲನೆಗೆ ಸಹಕರಿಸಿದ ಆರೋಪ ಭಾವೆ ಮೇಲಿದೆ. ವಕೀಲ ಅನಿಲ್‌ ಸಿಂಗ್ ಅವರು, ನ್ಯಾಯಮೂರ್ತಿ ಎಸ್.ಸಿ.ಧರ್ಮಾಧಿಕಾರಿ ನೇತೃತ್ವದ ನ್ಯಾಯಪೀಠಕ್ಕೆ ‘ಕೃತ್ಯಕ್ಕೆ ಬಳಸಿದ ಶಸ್ತ್ರಕ್ಕಾಗಿ ಹುಡುಕಾಟ ನಡೆದಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)