ಗೆಳತಿಯೊಂದಿಗಿನ ಸಂದೇಶ ವಿನಿಮಯ ಪ್ರಶ್ನಿಸಿದ್ದಕ್ಕೆ ಪತಿ ಆತ್ಮಹತ್ಯೆ !

7
ಗೆಳೆಯನ ಅಗಲಿಕೆಯಿಂದ ಆಘಾತಗೊಂಡ ಗೆಳತಿಯೂ ಸಾವಿಗೆ ಶರಣು

ಗೆಳತಿಯೊಂದಿಗಿನ ಸಂದೇಶ ವಿನಿಮಯ ಪ್ರಶ್ನಿಸಿದ್ದಕ್ಕೆ ಪತಿ ಆತ್ಮಹತ್ಯೆ !

Published:
Updated:

ಹೈದರಾಬಾದ್‌: ಗೆಳತಿಯೊಂದಿಗೆ ಮೊಬೈಲ್‌ನಲ್ಲಿ ನಿರಂತರವಾಗಿ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದುದನ್ನು ಹೆಂಡತಿ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೆಳೆಯನ ಸಾವಿನಿಂದ ಆಘಾತಕ್ಕೊಳಗಾದ ಗೆಳತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಇಲ್ಲಿನ ಸಿಕಂದರಾಬಾದ್‌ ಬಳಿಯ ಮರ್ರೆಪಲ್ಲಿಯಲ್ಲಿ ಎಲೆಕ್ಟ್ರಿಷಿಯನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆ. ಶಿವಕುಮಾರ್‌ (27) ಸಾವನ್ನಪ್ಪಿದವರು. ಆನ್‌ಲೈನ್‌ ಮೆಸೇಜ್‌ ಆ್ಯಪ್‌ನಲ್ಲಿ ಇವರು ತಮ್ಮ ಬಾಲ್ಯದ ಗೆಳತಿ ಸಿ. ವೆನ್ನೆಲಾ ಅವರೊಂದಿಗೆ ನಿರಂತರವಾಗಿ ಸಂದೇಶ ವಿನಿಮಯ ನಡೆಸುತ್ತಿದ್ದರು ಎನ್ನಲಾಗಿದೆ. 

ಕಳೆದ ಆಗಸ್ಟ್‌ 15ರಂದು ಶಿವಕುಮಾರ್‌ ಅವರ ವಿವಾಹವಾಗಿತ್ತು. ಗೆಳತಿಯೊಂದಿಗೆ ಮೆಸೇಜ್‌ ಮಾಡುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಪತಿ ಮತ್ತು ಪತ್ನಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಕಳೆದ ಶನಿವಾರ ಆನ್‌ಲೈನ್‌ ವೆಬ್‌ಆ್ಯಪ್‌ನಲ್ಲಿ ಪತಿ ಗೆಳತಿಯೊಂದಿಗೆ ಚಟ್‌ ಮಾಡುತ್ತಿದ್ದುದನ್ನು ನೋಡಿದ ಪತ್ನಿ ಜಗಳವಾಡಿದ್ದಾರೆ. ಇದರಿಂದ ಖಿನ್ನತೆಗೊಳಗಾದ ಶಿವಕುಮಾರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲ್ಯದ ಗೆಳೆಯ ಸಾವಿಗೀಡಾದ ಸುದ್ದಿ ಕೇಳಿ ವೆನ್ನೆಲಾ ಕೂಡ ವಿಷಸೇವಿಸಿ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !