ಛತ್ತೀಸಗಡದಲ್ಲಿ ಬಿಜೆಪಿ ಮೇಲಿನ ವಿಶ್ವಾಸ ಕಳೆದುಕೊಂಡ ಮತದಾರರು!

7

ಛತ್ತೀಸಗಡದಲ್ಲಿ ಬಿಜೆಪಿ ಮೇಲಿನ ವಿಶ್ವಾಸ ಕಳೆದುಕೊಂಡ ಮತದಾರರು!

Published:
Updated:

ನವದೆಹಲಿ: 'ರಮಣ್ ಪರ್ ವಿಶ್ವಾಸ್ ಕಮಲ್ ಸಂಗ್ ವಿಕಾಸ್' (ರಮಣ್ ಸಿಂಗ್ ಮೇಲೆ ನಂಬಿಕೆ, ಬಿಜೆಪಿ ಜತೆ ಅಭಿವೃದ್ಧಿ) ಎಂಬ ಘೋಷಣೆಯೊಂದಿಗೆ ಬಿಜೆಪಿ ಈ ಬಾರಿ ಛತ್ತೀಸಗಡದಲ್ಲಿ ಚುನಾವಣೆ ಎದುರಿಸಿತ್ತು. ಆದರೆ ಮತದಾರರು ರಮಣ್ ಸಿಂಗ್ ಅವರ ಮೇಲೆ ನಂಬಿಕೆ ಇಟ್ಟರೂ ಬಿಜೆಪಿಗೆ ಮತ ನೀಡಲು ಮುಂದಾಗಲಿಲ್ಲ.

15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ರಮಣ್ ಸಿಂಗ್ ಛತ್ತೀಸಗಡದಲ್ಲಿ ವಿಕಾಸ ಯಾತ್ರೆ ಕೈಗೊಂಡಿದ್ದು ಬಿಜೆಪಿಯ ನಿರೀಕ್ಷೆ ಹೆಚ್ಚಿಸಿತ್ತು. ಇಲ್ಲಿ ಮೋದಿ ಹವಾಗಿಂತ ರಮಣ್ ಸಿಂಗ್ ಮೇಲಿನ ಭರವಸೆ ಬಿಜೆಪಿಯ ಆತ್ಮ ವಿಶ್ವಾಸವನ್ನು ಹೆಚ್ಚಿಸಿತ್ತು. ಆದರೆ ವಿಕಾಸಯಾತ್ರೆಗೆ ಸಿಕ್ಕಿದ ಜೈಕಾರ ಇಲ್ಲಿ ಮತವಾಗಿ ಬದಲಾಗಿಲ್ಲ. ಅಷ್ಟೇ ಅಲ್ಲದೆ ಅಜಿತ್ ಜೋಗಿಯಿಂದಾಗಿ ಕಾಂಗ್ರೆಸ್ ಪಾಳಯದಲ್ಲುಂಟಾದ ಭಿನ್ನಮತ ತಮಗೆ ವರವಾಗುತ್ತದೆ ಎಂಬ ನಂಬಿಕೆ ಬಿಜೆಪಿಗೆ ಇತ್ತು. ಆದರೆ ಬಿಜೆಪಿಯ ಕಾರ್ಯತಂತ್ರ ಇಲ್ಲಿ ಫಲಿಸಲಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !