‘ಹಿಮಾಚಲದ ಪೊಲೀಸರ ಬಳಿ ₹200ಕ್ಕಿಂತ ಹೆಚ್ಚು ಇರುವಂತಿಲ್ಲ’

7

‘ಹಿಮಾಚಲದ ಪೊಲೀಸರ ಬಳಿ ₹200ಕ್ಕಿಂತ ಹೆಚ್ಚು ಇರುವಂತಿಲ್ಲ’

Published:
Updated:

ಶಿಮ್ಲಾ, ಹಿಮಾಚಲ ಪ್ರದೇಶ: ತಪಾಸಣಾ ಕೇಂದ್ರಗಳಲ್ಲಿ (ಚೆಕ್‌ಪಾಯಿಂಟ್‌) ಕೆಲಸ ಮಾಡುವ ಪೊಲೀಸ್ ಕಾನ್‌ಸ್ಟೆಬಲ್‌ಗಳು ತಮ್ಮ ಬಳಿ ₹200ಗಿಂತ ಹೆಚ್ಚು ಹಣ ಇಟ್ಟುಕೊಳ್ಳುವಂತಿಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಊನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವಾಕರ್ ಶರ್ಮಾ ಈ ಆದೇಶ ಹೊರಡಿಸಿದ್ದಾರೆ. 

ತಪಾಸಣಾ ಕೇಂದ್ರಗಳ ಪೊಲೀಸರು ಗಿರಿಧಾಮಗಳಿಗೆ ಬರುವ ಪ್ರವಾಸಿಗರಿಂದ ಲಂಚ ಸ್ವೀಕರಿಸುತ್ತಾರೆ ಎಂಬ ದೂರುಗಳು ಬಂದ ಕಾರಣ ಅವರು ಈ ಕ್ರಮ ಕೈಗೊಂಡಿದ್ದಾರೆ. ಚೆಕ್‌ಪಾಯಿಂಟ್‌ಗಳಲ್ಲಿ ಕೆಲಸ ಮಾಡುವ ಎಲ್ಲ ಪೊಲೀಸರಿಗೂ ಇದು ಅನ್ವಯ. ತಮ್ಮಲ್ಲಿ ಹೆಚ್ಚು ಹಣವಿದ್ದಲ್ಲಿ, ಸಮೀಪದ ಪೊಲೀಸ್ ಠಾಣೆಯಲ್ಲಿ ಅದನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.  

ಮಾರ್ಚ್ 28ರಂದು ಮುಬಾರಕ್‌ಪುರ ಗಿರಿಧಾಮದಲ್ಲಿ ಲಂಚ ಪಡೆಯುತ್ತಿದ್ದ ಐವರು ಪೊಲೀಸರನ್ನು ಎಸ್‌ಪಿ ಅಮಾನತುಗೊಳಿಸಿದ್ದರು. ಹೀಗಿದ್ದರೂ ಪ್ರವಾಸಿಗರಿಂದ ವಸೂಲಿ ಮಾಡುತ್ತಿರುವುದು ಕಡಿಮೆಯಾಗಿರಲಿಲ್ಲ. 

ಇಲ್ಲಿನ ಪ್ರಸಿದ್ಧ ಕ್ಷೇತ್ರಗಳಾದ ಚಿಂತ್‌ಪೂರ್ಣಿ, ಜವಲ್ಜಿ ಹಾಗೂ ಕಾಂಗ್ರಾಗೆ ಪಕ್ಕದ ಪಂಜಾಬ್‌ನ ಸಾವಿರಾರು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !