ಗುರುವಾರ , ಫೆಬ್ರವರಿ 25, 2021
20 °C

3 ಸಾವಿರ ಕಿ.ಮೀ. ಕ್ರಮಿಸಿದ ಆಂಬುಲೆನ್ಸ್‌ ಚಾಲಕರು

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಚೆನ್ನೈನಲ್ಲಿ ಸಾವನ್ನಪ್ಪಿದ ಯುವಕನ ಮೃತದೇಹವನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಲು 3 ಸಾವಿರ ಕಿ.ಮೀ ‍ಕ್ರಮಿಸಿದ ಆಂಬುಲೆನ್ಸ್‌ ಚಾಲಕರ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಚಾಲಕರಾದ ಪಿ.ಜಯಂತಿರನ್ ಮತ್ತು ಎಸ್. ಚಿನ್ನಥಂಬಿ ಅವರ ಸೇವೆಗೆ ಮಿಜೊರಾಂ ಮುಖ್ಯಮಂತ್ರಿ ಮತ್ತು ಜನರು ಧನ್ಯವಾದ ಅರ್ಪಿಸಿದ್ದಾರೆ.

ಮಿಜೊರಾಂ ನಿವಾಸಿ ವಿವಿಯನ್ ಲಾಲ್ರೆಮ್ಸಂಗಾ (28) ಹೃದಯಾಘಾತದಿಂದ ಮೃತರಾಗಿದ್ದರು. ಅಂತ್ಯಕ್ರಿಯೆಯನ್ನು ಸ್ಥಳೀಯ ಸ್ಮಶಾನದಲ್ಲಿ ಮಾಡುವಂತೆ ಅಧಿಕಾರಿಗಳು ತಿಳಿಸಿದರು. ಆದರೆ, ಮೃತ ವ್ಯಕ್ತಿಯ ಸ್ನೇಹಿತ ರಾಫೆಲ್ ಎವಿಎಲ್ ಮಲ್‌ಚ್ಚಾನ್‌ಹಿಮಾ ಇದಕ್ಕೆ ಒಪ್ಪಲಿಲ್ಲ. ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ಅನುಮತಿ ಪಡೆದರು. ಸ್ನೇಹಿತನ ಇಚ್ಛೆಯನ್ನು ಈಡೇರಿಸಲು ಈ ಆಂಬುಲೆನ್ಸ್‌ ಚಾಲಕರು ನೆರವಾದರು. 

‘ಮಿಜೊರಾಂನಲ್ಲಿ ಆ ಬಗೆಯ ಸ್ವಾಗತ ಸಿಗುತ್ತದೆ ಎಂದುಕೊಂಡಿರಲಿಲ್ಲ. ಮುಖ್ಯಮಂತ್ರಿ, ಐಎಎಸ್‌, ಐಪಿಎಸ್‌ ಅಧಿಕಾರಿಗಳು ಮತ್ತು ಜನರು ತೋರಿದ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ’ ಎಂದು ಚಾಲಕರು ತಿಳಿಸಿದ್ದಾರೆ. 

ಮೃತದೇಹವನ್ನು ತೆಗೆದುಕೊಂಡು ಹೋಗಲು ಮಿಜೊರಾಂ ಸರ್ಕಾರ ಮತ್ತು ಚೆನ್ನೈನಲ್ಲಿರುವ ಮಿಜೊ ಕಲ್ಯಾಣ ಇಲಾಖೆ ಸಹಕಾರ ನೀಡಿದವು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು