ಸೋಮವಾರ, ಅಕ್ಟೋಬರ್ 14, 2019
22 °C

ಷಿ ಜಿನ್‌ಪಿಂಗ್‌ಗೆ ಜನಪದ ಕಲಾ ತಂಡಗಳ ಸ್ವಾಗತ

Published:
Updated:

ಚೆನ್ನೈ: ಎರಡು ದಿನ ಭಾರತ ಭೇಟಿಗಾಗಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಶುಕ್ರವಾರ ಚೆನ್ನೈನಲ್ಲಿ ಬಂದಿಳಿದರು. ತಮಿಳುನಾಡಿನ ಕಡಲತಡಿಯ ಪ್ರವಾಸಿತಾಣ ಮಾಮಲ್ಲಪುರಂನಲ್ಲಿ ನಡೆಯಲಿರುವ ಅನೌಪಚಾರಿಕ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. 

ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಅವರನ್ನು ಬರಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಮತ್ತು ಷಿ ಜಿನ್‌ಪಿಂಗ್ ಎರಡನೇ ಬಾರಿಗೆ ಅನೌಪಚಾರಿಕ ಸಭೆ ಸೇರಲಿದ್ದಾರೆ.  

ಪ್ರಧಾನಿ ಮೋದಿ ಮತ್ತು ಷಿ ಜಿನ್‌ಪಿಂಗ್‌ ನಡುವೆ ಒಟ್ಟು 6 ಗಂಟೆಗಳ ಮಾತುಕತೆ ನಡೆಯಲಿದ್ದು, ಈ ಪೈಕಿ 40 ನಿಮಿಷದ ಭೇಟಿ ಅತ್ಯಂತ ಹೆಚ್ಚಿನ ಅವಧಿಯ ಸಭೆಯಾಗಿರಲಿದೆ. ಉಭಯ ರಾಷ್ಟ್ರಗಳ ಪ್ರತಿನಿಧಿಗಳಿಂದ ಪತ್ರಿಕಾ ಪ್ರಕಟಣೆ ಬಿಡುಗಡೆಯಾಗಲಿದೆ.

ಷಿ ಜಿನ್‌ಪಿಂಗ್‌ ಅವರು ಚೆನ್ನೈಗೆ ಬಂದಿಳಿದಾಗ ವಿಮಾನನಿಲ್ದಾನದಲ್ಲಿ ಅವರನ್ನು ಜನಪದ ಕಲಾವಿದರು ನೃತ್ಯ ಪ್ರದರ್ಶಿಸಿ ಸ್ವಾಗತಿಸಿದರು.

ಷಿ ಜಿನ್‌ಪಿಂಗ್ ಅವರು ಇಂದು ರಾತ್ರಿಯ ಊಟಕ್ಕೆ ತಮಿಳುನಾಡು ಸಾಂಪ್ರದಾಯಿಕ ಶೈಲಿಯ ಅಡುಗೆ ರುಚಿ ನೋಡಲಿದ್ದಾರೆ. ತಕ್ಕಾಲಿ ರಸಂ(ಟೊಮೆಟೊ ರಸ), ಅರಚವಿಟ್ಟ ಸಾಂಬಾರ್‌, ಕಡಲೈ ಕುರ್ಮಾ ಹಾಗೂ ಕವನರಸಿ ಹಲ್ವಾ ಇರಲಿದೆ. 
 

Post Comments (+)