ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ ಬಂದ್: ಚೆನ್ನೈ ಸ್ತಬ್ಧ

Last Updated 21 ಜೂನ್ 2020, 11:29 IST
ಅಕ್ಷರ ಗಾತ್ರ

ಚೆನ್ನೈ: ಆಸ್ಪತ್ರೆ ಹಾಗೂ ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ, ಬಹುತೇಕ ಚೆನ್ನೈ ಭಾನುವಾರ ಸ್ತಬ್ಧಗೊಂಡಿತ್ತು. ನಗರದಲ್ಲಿ ಕರ್ಫ್ಯೂ ವಾತಾವರಣ ಕಂಡುಬಂದಿತು. ರಸ್ತೆ, ಮೇಲ್ಸೇತುವೆಗಳನ್ನು ಬ್ಯಾರಿಕೇಡ್ ಹಾಕಿ ಸಂಪೂರ್ಣ ಬಂದ್ ಮಾಡಲಾಗಿತ್ತು. ಪೊಲೀಸರು, ಮಹಾನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರಿಗೆ ವಿನಾಯಿತಿ ಇತ್ತು. ಉಳಿದ ಎಲ್ಲ ಜನರು ಮನೆಯಲ್ಲೇ ಉಳಿದಿದ್ದರು.

ನಿಯಮ ಉಲ್ಲಂಘನೆ ಸಂಬಂಧ 4,799 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. 7,907 ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಜೂನ್ 19ರಿಂದ 12 ದಿನಗಳ ಲಾಕ್‌ಡೌನ್ ಘೋಷಿಸಿದ್ದ ಸರ್ಕಾರ, ದಿನಸಿ ಅಂಗಡಿ, ತರಕಾರಿ ಹಾಗೂ ಪೆಟ್ರೋಲ್ ಬಂಕ್‌ಗಳನ್ನು ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶ ಮಾಡಿಕೊಡಿಕೊಟ್ಟಿತ್ತು. ಆದರೆ ಭಾನುವಾರ ಈ ಯಾವ ಸೇವೆಗಳೂ ಲಭ್ಯ ಇರಲಿಲ್ಲ. ಜೂನ್ 21 ಹಾಗೂ 28ರ ಎರಡು ಭಾನುವಾರಗಳಂದು ಹಾಲು, ಆಂಬುಲೆನ್ಸ್, ಆಸ್ಪತ್ರೆ, ಮೆಡಿಕಲ್ ಶಾಪ್ ಹೊರತುಪಡಿಸಿ ಬೇರಾವ ಸೌಲಭ್ಯವೂ ಇರುವುದಿಲ್ಲ ಎಂದು ಸರ್ಕಾರ ಈ ಮೊದಲೇ ಸ್ಪಷ್ಟಪಡಿಸಿತ್ತು.

ಕೊರೊನಾ ವೈರಸ್ ರಾಜ್ಯದಲ್ಲಿ ಹೆಚ್ಚಾಗಿ ಬಾಧಿಸುತ್ತಿರುವುದರಿಂದ ತಾತ್ಕಾಲಿಕ ಲಾಕ್‌ಡೌನ್‌ಗೆ ತಮಿಳುನಾಡು ಸರ್ಕಾರ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT