ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲು ಹಕ್ಕಿಗಳ ಗುಂಪಿಗೆ ಚಿದಂಬರ: ಶಿಕ್ಷೆ ಅನುಭವಿಸಿದ ಗಣ್ಯರ ಪಟ್ಟಿ ಇಲ್ಲಿದೆ

ಐಎನ್‌ಎಕ್ಸ್‌ ಮೀಡಿಯಾ ಹಗರಣ
Last Updated 23 ಆಗಸ್ಟ್ 2019, 5:04 IST
ಅಕ್ಷರ ಗಾತ್ರ

ವಿವಿಧ ಪ್ರಕರಣಗಳಲ್ಲಿ ಜೈಲುಶಿಕ್ಷೆ ಅನುಭವಿಸಿದ ಭಾರತದ ಪ್ರಭಾವಿ ರಾಜಕಾರಣಿಗಳ ಪಟ್ಟಿ ದೊಡ್ಡದಿದೆ. ಆ ಪಟ್ಟಿಗೆ ಹೊಸ ಸೇರ್ಪಡೆ ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ. ಹೀಗೆ ಜೈಲು ಸೇರಿದವರಲ್ಲಿ ಹಲವರು ಜಾಮೀನಿನ ಮೇಲೆ ಹೊರಬಂದಿದ್ದಾರೆ, ಇನ್ನೂ ಕೆಲವರನ್ನು ಖುಲಾಸೆ ಮಾಡಲಾಗಿದೆ. ಮತ್ತೂ ಕೆಲವರು ಮೃತಪಟ್ಟಿದ್ದಾರೆ. ಅಂತಹ ಕೆಲವು ಪ್ರಮುಖ ಪ್ರಕರಣಗಳು ಇವು.

ಲಾಲು ಪ್ರಸಾದ್

ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಜಾನುವಾರುಗಳಿಗೆ ಮೇವು ಒದಗಿಸುವಲ್ಲಿ ನಡೆದ ಅಕ್ರಮದಲ್ಲಿ ಲಾಲು ತಪ್ಪಿತಸ್ಥರಾಗಿದ್ದಾರೆ. ಈ ಹಗರಣದ ಮುಖ್ಯ ಅಪರಾಧಿಯಾಗಿರುವ ಅವರು ಸೆರೆವಾಸದಲ್ಲಿದ್ದಾರೆ. ರೈಲ್ವೆ ಸಚಿವರಾಗಿದ್ದಾಗ ಹೋಟೆಲ್‌ಗೆ ರೈಲ್ವೆಯ ಜಾಗವನ್ನು ಮಂಜೂರು ಮಾಡುವಾಗಲೂ ಅಕ್ರಮ ಎಸಗಿದ್ದಾರ ಎಂಬ ಆರೋಪ ಲಾಲು ಮೇಲಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ

₹ 900 ಕೋಟಿ ಮೇವು ಹಗರಣದ ಮೊತ್ತ

14 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ

***

ಜೆ.ಜಯಲಲಿತಾ

1991–96ರ ಅವಧಿಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾಗ ಜಯಲಲಿತಾ ಅವರು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದಲ್ಲಿ ಜಯಲಲಿತಾ ಅವರಿಗೆ 2014ರಲ್ಲಿ ಜೈಲುಶಿಕ್ಷೆಯಾಗಿತ್ತು. ಆನಂತರ ಜಾಮೀನು ಪಡೆದು ಅವರು ಜೈಲಿನಿಂದ ವಾಪಸ್ಸಾಗಿದ್ದರು

1996ರಲ್ಲಿ ಒಮ್ಮೆ ಜಯಲಲಿತಾ ಅವರನ್ನು ಬಂಧಿಸಲಾಗಿತ್ತು

4 ವರ್ಷ 2014ರಲ್ಲಿ ಜಯಲಲಿತಾ ಅವರಿಗೆ ವಿಧಿಸಲಾದ ಜೈಲುಶಿಕ್ಷೆಯ ಅವಧಿ

21 ದಿನ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜಯಲಲಿತಾ ಅವರ ಶಿಕ್ಷೆಯ ಅವಧಿ

***

ಬಂಗಾರು ಲಕ್ಷ್ಮಣ್

2001–2002ರ ಅವಧಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಅವರಿಗೆ ಕಳಪೆ ಶಸ್ತ್ರಾಸ್ತ್ರ ಹಗರಣದಲ್ಲಿ ದೆಹಲಿ ಹೈಕೋರ್ಟ್ ಶಿಕ್ಷೆ ವಿಧಿಸಿತ್ತು.ಕಳಪೆ ಶಸ್ತ್ರಾಸ್ತ್ರ ಪೂರೈಕೆದಾರರಿಗೆ ಗುತ್ತಿಗೆ ದೊರೆಯುವಲ್ಲಿ ₹ 1 ಲಕ್ಷ ಲಂಚ ಪಡೆದ ಆರೋಪ ಅವರ ಮೇಲಿತ್ತು. ತಾವು ತಪ್ಪೆಸಗಿದ್ದಾಗಿ ಅವರು 2012ರಲ್ಲಿ ನ್ಯಾಯಾಲಯದ ಎದುರು ಒಪ್ಪಿಕೊಂಡಿದ್ದರು. ಅವರು 2014ರಲ್ಲೇ ಮೃತಪಟ್ಟಿದ್ದಾರೆ

4 ವರ್ಷ ಜೈಲು ಶಿಕ್ಷೆಯ ಅವಧಿ

***

2ಜಿ ಹಗರಣ ಮತ್ತು ಡಿಎಂಕೆ ನಾಯಕರು

ಯುಪಿಎ–2 ಅವಧಿಯಲ್ಲಿ 2ಜಿ ತರಂಗಾಂತರಗಳ ಹಂಚಿಕೆ ವೇಳೆ ಅಕ್ರ ನಡೆದಿದೆ ಎನ್ನಲಾದ ಆರೋಪದ ಅಡಿ ತಮಿಳುನಾಡಿನ ಡಿಎಂಕೆ ನಾಯಕರು ಮತ್ತು ಸಂಸದರು ಜೈಲುವಾಸ ಅನುಭವಿಸಿದ್ದಾರೆ. ಆದರೆ ಸಾಕ್ಷ್ಯಗಳ ಕೊರತೆ ಕಾರಣ ಡಿಎಂಕೆ ನಾಯಕರನ್ನು ನ್ಯಾಯಾಲಯವು 2017ರಲ್ಲಿ ಖುಲಾಸೆ ಮಾಡಿತ್ತು

**

ಎ.ರಾಜಾ

ಯುಪಿಎ ಸರ್ಕಾರದಲ್ಲಿ ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ಅವರನ್ನು 2ಜಿ ಹಗರಣದಲ್ಲಿ 2011ರ ಫೆಬ್ರುವರಿ 2ರಂದು ಬಂಧಿಸಲಾಗಿತ್ತು. ತಿಹಾರ ಜೈಲಿನಲ್ಲಿದ್ದ ಅವರು ಆನಂತರ ಜಾಮೀನಿನ ಮೇಲೆ ಹೊರಬಂದಿದ್ದರು

15 ತಿಂಗಳು ತಿಹಾರ ಜೈಲಿನಲ್ಲಿ ರಾಜಾ ಅವರು ಕಳೆದ ದಿನಗಳ ಸಂಖ್ಯೆ

**

ಕನಿಮೊಳಿ

ಡಿಎಂಕೆಯ ಅಂದಿನ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಮಗಳು ಕನಿಮೊಳಿ ಸಹ 2ಜಿ ಹಗರಣದಲ್ಲಿ ಜೈಲುಶಿಕ್ಷೆ ಅನುಭವಿಸಿದ್ದರು.

6 ತಿಂಗಳು ಜೈಲುವಾಸದ ಅವಧಿ

***

ಬಿ.ಎಸ್‌.ಯಡಿಯೂರಪ್ಪ

ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಸರ್ಕಾರಿ ಜಮೀನನ್ನು ಡಿನೋಟಿಫೈ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದರು. ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಲೋಕಾಯುಕ್ತ ನ್ಯಾಯಾಲಯವು ಜೈಲಿಗೆ ಕಳುಹಿಸಿತ್ತು. ಬಳ್ಳಾರಿಯ ಅಕ್ರಮ ಗಣಿಗಾರಿಕೆ ಹಗರಣದಲ್ಲೂ ಆರೋಪ–ತನಿಖೆ ಎದುರಿಸಿದ್ದರು. ಇದೇ ಪ್ರಕರಣದ ಕಾರಣ ಅವರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಅಕ್ರಮಗಣಿಗಾರಿಕೆ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಸಿಬಿಐ ನ್ಯಾಯಾಲಯವು ಖುಲಾಸೆ ಮಾಡಿತ್ತು

25 ದಿನ ಜೈಲುಶಿಕ್ಷೆಯ ಅವಧಿ

***

ಸುರೇಶ್ ಕಲ್ಮಾಡಿ

ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ಅವರು 2010ರ ಕಾಮೆನ್‌ವೆಲ್ತ್ ಕ್ರೀಡಾಕೂಟದ ಆಯೋಜನೆಯಲ್ಲಿ ಅಕ್ರಮ ನಡೆಸಿದ ಆರೋಪ ಎದುರಿಸಿದ್ದರು. 2011ರಲ್ಲಿ ಕಲ್ಮಾಡಿ ಅವರನ್ನು ಸಿಬಿಐ ಬಂಧಿಸಿತ್ತು. ಅವರು ದೆಹಲಿಯ ತಿಹಾರ್ ಜೈಲಿನಲ್ಲಿ ಸೆರೆವಾಸವನ್ನೂ ಅನುಭವಿಸಿದ್ದರು

9 ತಿಂಗಳು ಸೆರೆವಾಸದ ಅವಧಿ

***

ಅಮರ್ ಸಿಂಗ್

ಸಮಾಜವಾದಿ ಪಕ್ಷದ ಪ್ರಬಾವಿ ನಾಯಕರಲ್ಲಿ ಒಬ್ಬರಾಗಿದ್ದ ಅಮರ್ ಸಿಂಗ್ ಅವರು ‘ವೋಟಿಗಾಗಿ–ನೋಟು’ ಹಗರಣದಲ್ಲಿ ನ್ಯಾಯಾಂಗ ಬಂಧನವನ್ನು ಎದುರಿಸಿದ್ದರು. ಇವರ ವಿರುದ್ಧ ದೆಹಲಿ ಪೊಲೀಸರು ಆರೋಪಪಟ್ಟಿಯನ್ನೂ ಸಲ್ಲಿಸಿದ್ದರು. ಜಾಮೀನು ಸಿಗದ ಕಾರಣ ಅವರು ಕೆಲವು ದಿನಗಳನ್ನು ತಿಹಾರ್ ಜೈಲಿನಲ್ಲಿ ಕಳೆಯಬೇಕಾಯಿತು

13 ದಿನ ನ್ಯಾಯಾಂಗ ಬಂಧನದ ಅವಧಿ

***

ಎಸ್‌.ಪಿ.ತ್ಯಾಗಿ

ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿದ್ದ ಎಸ್‌.ಪಿ.ತ್ಯಾಗಿ ಅವರು ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಒಪ್ಪಂದದಲ್ಲಿ ಲಂಚ ಪಡೆದ ಆರೋಪ ಎದುರಿಸಿದ್ದರು. ಈ ಪ್ರಕರಣದಲ್ಲಿ ತ್ಯಾಗಿ ಅವರನ್ನು 2016ರಲ್ಲಿ ಸಿಬಿಐ ಬಂಧಿಸಿತ್ತು

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT