ನಿರುದ್ಯೋಗಿ ಯುವ ಬ್ರಾಹ್ಮಣರಿಗೆ ಸ್ವಿಫ್ಟ್ ಕಾರು ಕೊಡುಗೆ

7

ನಿರುದ್ಯೋಗಿ ಯುವ ಬ್ರಾಹ್ಮಣರಿಗೆ ಸ್ವಿಫ್ಟ್ ಕಾರು ಕೊಡುಗೆ

Published:
Updated:

ಹೈದರಾಬಾದ್:  ಚುನಾವಣೆ ಸಮೀಸುತ್ತಿದ್ದಂತೆ ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ ಜನರಿಗೆ ಕೊಡುಗೆಗಳನ್ನು ನೀಡುವ ಮೂಲಕ ಓಲೈಕೆ ಆರಂಭಿಸಿವೆ.
ಆಂಧ್ರ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಜು ಅವರು ಮತದಾರರರಿಗೆ ಸ್ಮಾರ್ಟ್ ಫೋನ್ ವಿತರಿಸಲು ತೀರ್ಮಾನಿಸಿದ್ದು, ನಿರುದ್ಯೋಗಿ ಯುವ ಬ್ರಾಹ್ಮಣರಿಗೆ ಸ್ವಿಫ್ಟ್ ಡಿಜೈರ್ ಕಾರು ವಿತರಿಸಲಿದ್ದಾರೆ.

ಒಟ್ಟು 14 ಮಿಲಿಯನ್ ಸ್ಮಾರ್ಟ್ ಫೋನ್‍ಗಳನ್ನು  ವಿತರಿಸಲು ನಾಯ್ಡು ತೀರ್ಮಾಸಿಸಿದ್ದಾರೆ. ಅದೇ ವೇಳೆ ನಿರುದ್ಯೋಗಿ ಯುವ ಬ್ರಾಹ್ಮಣರಿಗೆ 30 ಸ್ವಿಫ್ಟ್  ಡಿಜೈರ್ ಕಾರು ವಿತರಿಸುವುದಾಗಿ ಶುಕ್ರವಾರ ಅಮರಾವತಿಯಲ್ಲಿ ನಡೆದ  ಶಿಬಿರದಲ್ಲಿ ತೀರ್ಮಾನಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ನಿರುದ್ಯೋಗಿ ನಿವಾರಣೆ ಕಾರ್ಯಕ್ರಮದ ಅಂಗವಾಗಿ ಕಾರು ವಿತರಣೆ ಮಾಡಲಾಗುವುದು. 

ಬ್ರಾಹ್ಮಿಣ್ ವೆಲ್ಫೇರ್ ಕಾರ್ಪೊರೇಷನ್ ಇದಕ್ಕಾಗಿ ಗರಿಷ್ಠ ₹2 ಲಕ್ಷ ಸಬ್ಸಿಡಿ ನೀಡಲಿದ್ದು, ಕಾರು ಪಡೆದ ಫಲಾನುಭವಿಗಳು ವಾಹನದ ಬೆಲೆಯ ಶೇ. 10ರಷ್ಟು ಪಾವತಿ ಮಾಡಬೇಕಾಗುತ್ತದೆ. ಇನ್ನುಳಿದ ಹಣವನ್ನು ಆಂಧ್ರ ಪ್ರದೇಶ ಬ್ರಾಹ್ಮಿಣ್ ಕಾರ್ಪೊರೇಟಿವ್ ಕ್ರೆಡಿಟ್ ಸೊಸೈಟಿಯಿಂದ ಸಾಲ ಪಡೆದು, ಬ್ಯಾಂಕ್‍ಗೆ ತಿಂಗಳಿಗೆ ಕಂತು ಮೂಲಕ ಪಾವತಿ ಮಾಡಬೇಕಾಗುತ್ತದೆ. ಬ್ರಾಹ್ಮಿಣ್ ವೆಲ್ಫೇರ್ ಕಾರ್ಪೊರೇಷನ್ ಮೊದಲ ಹಂತದಲ್ಲಿ 50 ಕಾರುಗಳನ್ನು ಮಂಜೂರು ಮಾಡಿದೆ.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !