ಮಕ್ಕಳನ್ನು ದುಡಿಮೆಗೆ ತಳ್ಳುವ ಕಾಯ್ದೆ!

7

ಮಕ್ಕಳನ್ನು ದುಡಿಮೆಗೆ ತಳ್ಳುವ ಕಾಯ್ದೆ!

Published:
Updated:

ವಿಶ್ವದಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಪ್ರತಿ 17 ಮಕ್ಕಳಲ್ಲಿ (5ರಿಂದ 18 ವರ್ಷ ವಯಸ್ಸು) ಒಂದು ಮಗು ಭಾರತದ್ದಾಗಿದೆ. ದೇಶದಲ್ಲಿ ಪ್ರತಿ 11 ಮಕ್ಕಳಲ್ಲಿ ಒಂದು ಮಗುವನ್ನು ದುಡಿಮೆಗೆ ದೂಡಲಾಗಿದೆ ಎಂದು ‘ಚೈಲ್ಡ್‌ ರೈಟ್ಸ್ ಅಂಡ್ ಯೂ’ ಸ್ವಯಂ ಸೇವಾ ಸಂಘಟನೆ ಹೇಳಿದೆ. 15–18 ವರ್ಷದ 2.3 ಕೋಟಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಅದು ಹೇಳಿದೆ.

ವಿಶ್ವದಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ‍ಪ್ರತಿ 17 ಮಕ್ಕಳಲ್ಲಿ (5ರಿಂದ 18 ವರ್ಷ ವಯಸ್ಸು) ಒಂದು ಮಗು ಭಾರತದ್ದಾಗಿದೆ. ದೇಶದಲ್ಲಿ ಪ್ರತಿ 11 ಮಕ್ಕಳಲ್ಲಿ ಒಂದು ಮಗುವನ್ನು ದುಡಿಮೆಗೆ ದೂಡಲಾಗಿದೆ ಎಂದು ‘ಚೈಲ್ಡ್‌ ರೈಟ್ಸ್ ಅಂಡ್ ಯೂ’ ಸ್ವಯಂ ಸೇವಾ ಸಂಘಟನೆ ಹೇಳಿದೆ. 15–18 ವರ್ಷದ 2.3 ಕೋಟಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಅದು ಹೇಳಿದೆ
**

15–18 ವರ್ಷದೊಳಗಿನವರ ಅಂಕಿ–ಅಂಶ

2.3 ಕೋಟಿ 
ಬಾಲಕಾರ್ಮಿಕರು

1.9 ಕೋಟಿ 
ಶಾಲೆ ಬಿಟ್ಟ ಮಕ್ಕಳು

92 ಲಕ್ಷ 
ಮಕ್ಕಳು ಬಾಲ್ಯವಿವಾಹವಾಗಿದ್ದಾರೆ

24 ಲಕ್ಷ 
ಹೆಣ್ಣುಮಕ್ಕಳು ತಾಯಿಯಾಗಿದ್ದರೆ

60%
ದೇಶದಲ್ಲಿ ದಾಖಲಾದ ಅಪಹರಣ ಪ್ರಕರಣಗಳಲ್ಲಿ ಸಂತ್ರಸ್ತರು ಮಕ್ಕಳೇ ಆಗಿರುವ ಪ್ರಮಾಣ

25%
ದೇಶದಲ್ಲಿ ನಡೆಯುವ ಅತ್ಯಾಚಾರಕ್ಕೆ ಬಲಿಯಾಗುತ್ತಿರುವವರಲ್ಲಿ ಈ ವಯೋಮಾನದ ಮಕ್ಕಳ ಪ್ರಮಾಣ

* ಬಡತನದ ಕಾರಣ ಈ ಮಕ್ಕಳೆಲ್ಲರೂ ಕಾರ್ಮಿಕರಾಗಿದ್ದಾರೆ. ಈ ಮಕ್ಕಳೆಲ್ಲರೂ ‘ಅಪಾಯಕಾರಿಯಲ್ಲದ’ ದುಡಿಮೆಗಳಲ್ಲಿ ತೊಡಗಿದ್ದಾರೆ. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯು ಈ ಸ್ವರೂಪದ ದುಡಿಮೆಯನ್ನು ಕಾನೂನುಬದ್ಧಗೊಳಿಸಿದೆ

* ದುಡಿಮೆ ಮತ್ತು ಶಿಕ್ಷಣವನ್ನು ಒಟ್ಟಿಗೇ ಮಾಡಲು ಸಾಧ್ಯವಿಲ್ಲದ ಕಾರಣ ಈ ಮಕ್ಕಳು ಶಾಲೆ ತೊರೆದಿದ್ದಾರೆ. 

ಶಿಫಾರಸುಗಳು

* ಬಡತನ ನಿರ್ಮೂಲನೆ ಮಾಡುವುದರಿಂದ ಮತ್ತು ಎಲ್ಲರಿಗೂ ಪೌಷ್ಟಿಕಾಂಶಯುಕ್ತ ಆಹಾರ ದೊರೆಯುವಂತೆ ಮಾಡುವುದರಿಂದ ಬಾಲ ಕಾರ್ಮಿಕ ಪದ್ಧತಿಯನ್ನು ನಿವಾರಣೆ ಮಾಡಲು ಸಾಧ್ಯ

* ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಮತ್ತು ಆಹಾರ ಭದ್ರತೆ ದೊರೆಯುವಂತೆ ಮಾಡುವುದರಿಂದ ಅವರು ಶಾಲೆ ತೊರೆಯುವುದನ್ನು ತಡೆಯಬಹುದು

* ಮಕ್ಕಳ ಮೇಲಿನ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದರಿಂದ ಕಡಿವಾಣ ಹಾಕಲು ಸಾಧ್ಯವಾಗುತ್ತದೆ

ಆಧಾರ: ಪಿಟಿಐ, ಚೈಲ್ಡ್‌ ರೈಟ್ಸ್‌ ಅಂಡ್ ಯೂ

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !