ಸೋಮವಾರ, ನವೆಂಬರ್ 18, 2019
25 °C
ಭಾರತದ ಮೇಲಿನ ಅವಲಂಬನೆ ತಪ್ಪಿಸುವ ಪ್ರಯತ್ನ

ರೈಲು ಮಾರ್ಗ, ಸುರಂಗ ರಸ್ತೆ ನಿರ್ಮಾಣ : ನೇಪಾಳ–ಚೀನಾ ಒಪ್ಪಂದ

Published:
Updated:
Prajavani

ಕಠ್ಮಂಡು: ಟಿಬೆಟ್‌ಗೆ ರೈಲು ಮಾರ್ಗದ ಸಂಪರ್ಕ ಮತ್ತು ರಸ್ತೆ ಸುರಂಗ ನಿರ್ಮಿಸುವ ಎರಡು ಪ್ರತ್ಯೇಕ  ಯೋಜನೆಗಳ ಅನುಷ್ಠಾನಕ್ಕೆ ನೇಪಾಳ ಮತ್ತು ಚೀನಾ ಒಪ್ಪಂದ ಮಾಡಿಕೊಂಡಿವೆ.

ಚೀನಾ ಜತೆ ಹೆಚ್ಚು ಸಂಪರ್ಕ ಸಾಧಿಸುವ ಮೂಲಕ ವ್ಯಾಪಾರ ಮಾರ್ಗಕ್ಕೆ ಭಾರತದ ಮೇಲಿನ ಅವಲಂಬನೆಯನ್ನು ಅಂತ್ಯಗೊಳಿಸುವುದು ಈ ಒಪ್ಪಂದದ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ.

70 ಕಿಲೋ ಮೀಟರ್‌ ಉದ್ದದ ರೈಲು ಮಾರ್ಗವು ಟಿಬೆಟ್‌ನ ಗ್ಯಿರಾನ್‌ ಮತ್ತು ಕಠ್ಮಂಡು ನಡುವೆ ಸಂಪರ್ಕ ಕಲ್ಪಿಸಲಿದೆ. ಚೀನಾದ ತಂಡವು ಈಗಾಗಲೇ ಈ ಬಗ್ಗೆ ಅಧ್ಯಯನ ನಡೆಸಿದೆ.

ಪ್ರತಿಕ್ರಿಯಿಸಿ (+)