ದೂರಸಂವೇದಿಯ ಎರಡು ಉಪಗ್ರಹ ಯಶಸ್ವಿ ಉಡ್ಡಯನ

7

ದೂರಸಂವೇದಿಯ ಎರಡು ಉಪಗ್ರಹ ಯಶಸ್ವಿ ಉಡ್ಡಯನ

Published:
Updated:

ಬೀಜಿಂಗ್‌: ಪರಿಸರದಲ್ಲಿರುವ ವಿದ್ಯುತ್ಕಾಂತೀಯ ತರಂಗಗಳ ಅಧ್ಯಯನಕ್ಕೆ ಚೀನಾವು ಎರಡು ದೂರ ಸಂವೇದಿ ಉಪಗ್ರಹಗಳನ್ನು ಮಂಗಳವಾರ ಯಶಸ್ವಿಯಾಗಿ ಉಡ್ಡಯನ ಮಾಡಿದೆ.

ವಾಯವ್ಯ ಚೀನಾದಲ್ಲಿರುವ ಉಪಗ್ರಹ ಉಡ್ಡಯನ ಕೇಂದ್ರ ಜಿಯುಕ್ವಾನ್‌ನಿಂದ ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಬಾಹ್ಯಾಕಾಶದ ಯೋಜಿತ ಕಕ್ಷೆಯನ್ನು ಉಪಗ್ರಹಗಳು ಯಶಸ್ವಿಯಾಗಿ ತಲುಪಿವೆ ಎಂದು ಕ್ಸಿನ್ಹುಆ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪರಿಸರದಲ್ಲಿನ ವಿದ್ಯುತ್ಕಾಂತೀಯ ತರಂಗಗಳ ಸಮೀಕ್ಷೆ ಮತ್ತು ಇತರ ತಂತ್ರಜ್ಞಾನ ಸಂಬಂಧಿತ ಪರೀಕ್ಷೆಗಳಿಗೆ ಈ ಉಪಗ್ರಹಗಳನ್ನು ಬಳಸಲಾಗುತ್ತದೆ. ಭೂಮಿಯಿಂದ ಹೊರಹೊಮ್ಮುವ ಶಕ್ತಿ ಪತ್ತೆಹಚ್ಚಲು ಬೇಕಾದ ದತ್ತಾಂಶಗಳನ್ನು ಈ ಉಪಗ್ರಹಗಳು ಸಂಗ್ರಹಿಸಲಿವೆ.

ಯೋಗಾನ್‌–32 ಸಮೂಹಕ್ಕೆ ಸೇರಿದ ಈ ಉಪಗ್ರಹಗಳನ್ನು ಲಾಂಗ್‌ ಮಾರ್ಚ್‌ –2ಸಿ ರಾಕೆಟ್‌ ಹೊತ್ತು, ಸ್ಥಳೀಯ ಕಾಲಮಾನ ಬೆಳಿಗ್ಗೆ 10.43ಕ್ಕೆ ನಭಕ್ಕೆ ಜಿಗಿದಿದೆ. ಲಾಂಗ್‌ ಮಾರ್ಚ್‌ ರಾಕೆಟ್‌ ಸರಣಿಯಲ್ಲಿ ಇದು 286ನೇ ಉಡಾವಣೆಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !