ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮೇಲೆ 40 ಸಾವಿರಕ್ಕೂ ಹೆಚ್ಚು ಬಾರಿ ಚೀನೀಯರ ಸೈಬರ್‌ ದಾಳಿ

Last Updated 24 ಜೂನ್ 2020, 7:21 IST
ಅಕ್ಷರ ಗಾತ್ರ

ಮುಂಬೈ: ಚೀನಾದ ಸಿಚುವಾನ್ ಪ್ರಾಂತ್ಯದ ಚೆಂಗ್ಡು ನಗರದಿಂದ ಭಾರತದ ಮೇಲೆ 40,000 ಕ್ಕೂ ಹೆಚ್ಚು ಬಾರಿ ಚೀನಿಯರು ಸೈಬರ್‌ ದಾಳಿ ನಡೆಸಿದ್ದಾರೆ ಎಂದು ಮಹಾರಾಷ್ಟ್ರದ ಸೈಬರ್‌ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಮುಖ್ಯವಾಗಿ ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್‌ ಕ್ಷೇತ್ರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.

‘ಸೈಬರ್ ದಾಳಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ ಮತ್ತು ಇದ್ದಕ್ಕಿದ್ದಂತೆ, ಭಾರತದ ಸೈಬರ್ ಸಂಪನ್ಮೂಲಗಳಾದ ಮೂಲಸೌಕರ್ಯ, ಐಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಮೇಲೆ ಹೆಚ್ಚಿನ ಸಂಖ್ಯೆಯ ದಾಳಿಗಳು ನಡೆದಿವೆ ತಿಳಿದುಬಂದಿದೆ. ಈ ದಾಳಿಗಳು ಹೆಚ್ಚಾಗಿ ಚೆಂಗ್ಡು ನಗರದಿಂದ ನಡೆದಿವೆ’ ಎಂದು ಐಜಿ (ಸೈಬರ್‌) ಯಶಸ್ವಿ ಯಾದವ್‌ ತಿಳಿಸಿದ್ದಾರೆ.

‘ಕಳೆದ ನಾಲ್ಕೈದು ದಿನಗಳಲ್ಲಿ ಸುಮಾರು 40,300 ಬಾರಿ ದಾಳಿ ನಡೆಸಿರುವುದು ಪತ್ತೆಯಾಗಿದೆ. ಇವುಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ’ ಎಂದು ಯಾದವ್‌ ಹೇಳಿದ್ದಾರೆ.

‘ದೆಹಲಿ, ಮುಂಬೈ, ಹೈದರಾಬಾದ್‌, ಚೆನ್ನೈ ಮತ್ತು ಅಹಮದಾಬಾದ್‌ನ ಎಲ್ಲಾ ನಿವಾಸಿಗಳಿಗೆ ಉಚಿತ ಕೋವಿಡ್‌-19 ಪರೀಕ್ಷೆ’ ಎಂಬ ವಿಷಯದ ಸಾಲಿನೊಂದಿಗೆ ನಕಲಿ ಇ-ಮೇಲ್ ಐಡಿಯನ್ನು ಬಳಸಿಕೊಂಡು ಫಿಶಿಂಗ್‌ ದಾಳಿ ನಡೆಸುವ ಮೂಲಕ ವಂಚಕರು ಮಾಹಿತಿಯನ್ನು ಕದಿಯುವ ಸಾಧ್ಯತೆಗಳಿವೆ’ಎಂದು ಮಹಾರಾಷ್ಟ್ರ ಸೈಬರ್‌ ವಿಭಾಗದ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ವೊಲಾನ್ ಸೈಬರ್ ಸೆಕ್ಯುರಿಟಿಯ ಸಹ-ಸಂಸ್ಥಾಪಕ ಮುಸ್ಲಿಂ ಕೋಸರ್‌ ಮಾತನಾಡಿ, ‘ಕಳೆದ ಒಂದು ತಿಂಗಳಿನಿಂದ ಎರಡು ದೇಶಗಳ (ಭಾರತ– ಚೀನಾ) ನಡುವೆ ಗಡಿ ವಿವಾದ ಮುನ್ನೆಲೆಗೆ ಬಂದಾಗಿನಿಂದಲೂ ಡಿಜಿಟಲ್‌ ಕ್ಷೇತ್ರದ ಮೇಲೆಸೈಬರ್‌ ದಾಳಿಗಳು ನಡೆಯುತ್ತಿವೆ. ಭಾರತ–ನೇಪಾಳ ಗಡಿ ಸಮಸ್ಯೆ ಸಂದರ್ಭದಲ್ಲಿ ನೇಪಾಳದ ಹ್ಯಾಕರ್‌ರೊಬ್ಬರು ಡಾರ್ಕ್‌ ವೆಬ್‌ನಲ್ಲಿ ಆಧಾರ್‌ ಡೇಟಾ ಬಿಡುಗಡೆ ಮಾಡಿದ್ದರು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT