ಶನಿವಾರ, ಅಕ್ಟೋಬರ್ 19, 2019
22 °C

ಚಿನ್ಮಯಾನಂದ ಪ್ರಕರಣ: ಪೊಲೀಸ್‌ ನಿರ್ಲಕ್ಷ್ಯಕ್ಕೆ ಪ್ರಿಯಾಂಕಾ ಟೀಕೆ

Published:
Updated:

ನವದೆಹಲಿ(ಪಿಟಿಐ): ಉನ್ನಾವ್‌ ಅತ್ಯಾಚಾರ ಪ್ರಕರಣದಂತೆ ಚಿನ್ಮಯಾನಂದ ಪ್ರಕರಣದಲ್ಲೂ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಹಾಗೂ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದು, ಆರೋಪಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. 

ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಅವರನ್ನು ತಕ್ಷಣವೇ ಬಂಧಿಸದೇ ಇದ್ದರೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅತ್ಯಾಚಾರ ಆರೋಪ ಮಾಡಿದ್ದ ವಿದ್ಯಾರ್ಥಿನಿ ಬುಧವಾರ ಬೆದರಿಕೆ ಹಾಕಿದ್ದರು. ಗುರುವಾರ ಈ ಕುರಿತಂತೆ ಟ್ವೀಟರ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ, ‘ಉನ್ನಾವ್‌ ಪ್ರಕರಣದಲ್ಲಿ ತೋರಿದ ನಿರ್ಲಕ್ಷ್ಯದ ಪರಿಣಾಮ ಎಲ್ಲರ ಎದುರಿಗಿದೆ. ಸಂತ್ರಸ್ತೆ ಭಯದಿಂದ ಇದ್ದಾರೆ. ಬಿಜೆಪಿ ಸರ್ಕಾರ ಹಾಗೂ ಪೊಲೀಸರು ಈ ಪ್ರಕರಣದಲ್ಲೂ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದಿದ್ದಾರೆ.  

Post Comments (+)