ಮಂಗಳವಾರ, ನವೆಂಬರ್ 19, 2019
29 °C

ಚಿರಾಗ್ ಪಾಸ್ವಾನ್‌ ಎಲ್‌ಜೆಪಿ ನೂತನ ಅಧ್ಯಕ್ಷ

Published:
Updated:
Prajavani

ನವದೆಹಲಿ: ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷರಾಗಿ ಚಿರಾಗ್ ಪಾಸ್ವಾನ್‌ ಆಯ್ಕೆಯಾದರು. ಮಂಗಳವಾರ ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅವಿರೋಧವಾಗಿ ಆಯ್ಕೆಯಾದರು ಎಂದು ನಿರ್ಗಮಿತ ಅಧ್ಯಕ್ಷ, ಚಿರಾಗ್ ಅವರ ತಂದೆ ರಾಂ ವಿಲಾಸ್‌ ಪಾಸ್ವಾನ್ ಪ್ರಕಟಿಸಿದರು.

ಎಲ್‌ಜೆಪಿ ಬಿಹಾರದಲ್ಲಿ ಮುಖ್ಯವಾಗಿ ದಲಿತ ಸಮುದಾಯದ ಬೆಂಬಲವನ್ನು ಹೊಂದಿದೆ. ಪಕ್ಷವನ್ನು ರಾಂ ವಿಲಾಸ್‌ ಪಾಸ್ವಾನ್ 2000ರಲ್ಲಿ ಸ್ಥಾಪಿಸಿದ್ದರು. ಕಳೆದ ಒಂಬತ್ತು ವರ್ಷಗಳಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷವು ವಿವಿಧ ಚಿಂತನೆಗಳನ್ನು ಒಳಗೊಂಡ ಪಕ್ಷಗಳ ಜೊತೆಗೆ ಕೈಜೋಡಿಸಿದೆ.

ಲೋಕಸಭೆಗೆ ಎರಡನೇ ಅವಧಿಗೆ ಆಯ್ಕೆಯಾಗಿರುವ ಚಿರಾಗ್‌ ಈಗಾಗಲೇ ಪಕ್ಷದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 

 

 

 

ಪ್ರತಿಕ್ರಿಯಿಸಿ (+)