ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌‌ಡೌನ್: ಮುಚ್ಚಿದ ಕಾರ್ಖಾನೆಗಳು, ಸಿಗರೇಟಿಗೆ ದುಪ್ಪಟ್ಟು ಬೆಲೆ

Last Updated 10 ಏಪ್ರಿಲ್ 2020, 8:05 IST
ಅಕ್ಷರ ಗಾತ್ರ

ಬೆಂಗಳೂರು: ಸಿಗರೇಟು ಪ್ರಿಯರಿಗೆ ಈಗ ಕೆಟ್ಟ ಸುದ್ದಿಯೊಂದು ಬಂದಿದೆ.

ಲಾಕ್‌‌ಡೌನ್ ಕಾರಣದಿಂದಾಗಿ ಸಿಗರೇಟು ಬೆಲೆ ಇದೀಗ ದುಪ್ಪಟ್ಟು ಏರಿಕೆಯಾಗಿದ್ದು, ಪೂರೈಕೆ ಮಾಡುತ್ತಿದ್ದ ಎಲ್ಲಾ ತಯಾರಿಕಾ ಕಾರ್ಖಾನೆಗಳು ಬಂದ್ ಆಗಿರುವ ಕಾರಣ ಈ ಏರಿಕೆ ಕಂಡಿದೆ.ಕೊರೊನಾ ಸೋಂಕು ಬೆದರಿಕೆಯ ಕಾರಣ ಎಲ್ಲಾ ತಯಾರಕರು ಕಾರ್ಖಾನೆಯನ್ನು ಬಂದ್ ಮಾಡಿ ಎರಡು ವಾರಗಳು ಕಳೆದಿವೆ. ಹೀಗಾಗಿ ಇರುವ ಸಿಗರೇಟುಗಳನ್ನು ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಸಿಗರೇಟು ಮಾರಾಟಮಾಡುತ್ತಿದ್ದಾರೆ ಎನ್ನಲಾಗಿದೆ.

ಲಾಕ್‌‌ಡೌನ್‌ಗಿಂತ ಮುಂಚೆ ಗೋಲ್ಡ್ ಫ್ಲೇಕ್ ಕಿಂಗ್ಸ್ (84ಎಂಎಂ ಗಾತ್ರ)ನಂತಹ ದೇಶೀಯ ಬ್ರಾಂಡ್‌‌ಗಳು ಈ ಹಿಂದೆ 10 ಸಿಗರೇಟುಗಳ ಒಂದು ಪ್ಯಾಕ್‌‌ಗೆ ₹160 ಇದ್ದದ್ದು ಈಗ ₹300ಕ್ಕೆ ಏರಿಕೆಯಾಗಿದೆ.ಮಾರ್ಲ್ಬೊರೊ ಹಾಗೂ ಇಂಡಿಯಾ ಕಿಂಗ್ಸ್‌‌ನಂತಹ ಬ್ರಾಂಡ್ ಬೆಲೆಯೂ ಇದೇ ರೀತಿ ಏರಿಕೆಯಾಗಿದೆ. ವಿದೇಶಿ ಸಿಗರೇಟುಗಳ ಬೆಲೆಗಳಲ್ಲಿ ದುಪ್ಪಟ್ಟು ಏರಿಕೆಯಾಗಿದೆ. ವಿದೇಶಿಬ್ರಾಂಡ್ಎಸ್ಸೆಲೈಟ್ಸ್ ಈಗ 10ಪ್ಯಾಕ್‌ಗಳ ಒಂದು ಬಾಕ್ಸ್ ಬೆಲೆ ₹2700ಗೆ ಏರಿಕೆಯಾಗಿದೆ. ಇದರ ಬೆಲೆ ಲಾಕ್ ಡೌನ್‌‌ಗಿಂತ ಮುಂಚೆ ₹1300 ಇತ್ತು.

'ನಾನು 10 ಸಿಗರೇಟುಗಳ ಒಂದು ಪ್ಯಾಕ್ ಬೆಲೆ ₹300 ಕೊಡುತ್ತಿದ್ದೇನೆ. ಇದು ತುಂಬಾಅನಾನುಕೂಲವಾಗಿದೆ' ಎಂದು ಮಲ್ಲೇಶ್ವರಂ ಬಳಿ ವಾಸಿಸುವ ಗ್ರಾಹಕರೊಬ್ಬರು ಹೇಳುತ್ತಾರೆ.

ಇನ್ನೊಂದು ಕಡೆ ಚಿಲ್ಲರೆ ಮಾರಾಟಗಾರರು ಪೂರೈಕೆದಾರರನ್ನು ದೂರುತ್ತಿದ್ದಾರೆ. ನಾವು ದುಪ್ಪಟ್ಟು ಬೆಲೆ ಕೊಟ್ಟು ಖರೀದಿ ಮಾಡುತ್ತಿದ್ದೇವೆ.
ಸ್ವಲ್ಪ ಲಾಭ ಇಟ್ಟುಕೊಂಡು ಮಾರಾಟ ಮಾಡಲೇಬೇಕು. ನಾವು ಏನು ಮಾಡುವುದು ಎಂದುಚಿಲ್ಲರೆ ಮಾರಾಟಗಾರರೊಬ್ಬರು ಹೇಳುತ್ತಾರೆ.

ಭಾರತದ ಅತಿದೊಡ್ಡ ಸಿಗರೇಟು ತಯಾರಿಕಾ ಕಂಪನಿ ಐಟಿಸಿ, ಗ್ರಾಹಕರು ಹೆಚ್ಚಿನ ಬೆಲೆ ನೀಡದಂತೆ ಮನವಿ ಮಾಡಿದೆ. ಚಿಲ್ಲರೆ ಪಾಕೆಟ್‌‌ಗಳಲ್ಲಿ ಮುದ್ರಿಸಲಾದ ಬೆಲೆಗಿಂತ ಹೆಚ್ಚಿನ ಹಣವನ್ನು ಪಾವತಿ ಮಾಡದಂತೆಗ್ರಾಹಕರಲ್ಲಿ ಮನವಿ ಮಾಡುತ್ತೇವೆ ಎಂದು ಕಂಪನಿಯ ವಕ್ತಾರರು ಹೇಳುತ್ತಾರೆ.

ಕೊರೊನಾ ವೈರಸ್ ಉಸಿರಾಟದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದರಿಂದ ಧೂಮಪಾನ ಮಾಡಬೇಡಿ ಎಂದು ವೈದ್ಯರು ಹಾಗೂ ಶ್ವಾಸಕೋಶ ತಜ್ಞರು ಜನರಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT