ಸೋಮವಾರ, ಡಿಸೆಂಬರ್ 16, 2019
18 °C

ಮಾದಕ ಮೈಮಾಟದ ಬಹುಭಾಷಾ ತಾರೆ ನಮಿತಾ ಬಿಜೆಪಿ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಬಹುಭಾಷಾ ತಾರೆ ನಮಿತಾ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರಿದ್ದಾರೆ. 

ಬಿಜೆಪಿಯ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಅವರ ಸಮ್ಮುಖದಲ್ಲಿ ನಮಿತಾ ಬಿಜೆಪಿಗೆ ಸೇರಿದ್ದಾರೆ.

ಎಐಎಡಿಎಂಕೆ ಸೇರಿದ ನಮಿತಾ ಕಳೆದೊಂದು ವರ್ಷದಿಂದ ಆ ಪಕ್ಷದಿಮದ ಅಂತರ ಕಾಯ್ದುಕೊಂಡಿದ್ದರು. ಇದೀಗ ಆ ಪಕ್ಷವನ್ನು ತೊರೆದು ಬಿಜೆಪಿ ಸೇರುವ ಮೂಲಕ ಸಕ್ರಿಯ ರಾಜಕಾರಣಿಯಾಗಲಿದ್ದೇನೆ ಎಂದು ನಮಿತಾ ಹೇಳಿದ್ದಾರೆ.

2002ರಲ್ಲಿ ತೆಲುಗಿನ  ‘ಸೊಂತಂ’  ಚಿತ್ರದ ಮೂಲಕ  ಬೆಳ್ಳಿತೆರೆಗೆ ಬಂದ ನಮಿತಾ ನಂತರದ ದಿನಗಳಲ್ಲಿ ತಮಿಳು, ಕನ್ನಡ ಮತ್ತು ಮಲೆಯಾಳಂ ಚಿತ್ರಗಳಲ್ಲಿ ಮಿಂಚಿದ್ದರು. 

ಕನ್ನಡದಲ್ಲಿ ‘ನೀಲಕಂಠ’, ‘ಹೂ’, ‘ನಮಿತಾ ಐ ಲವ್ ಯು’ ಚಿತ್ರಗಳ ಮೂಲಕ ತಮ್ಮ ಮಾದಕ ಮೈಮಾಟವನ್ನು ರಾಜ್ಯದ ಬೆಳ್ಳಿತೆರೆಗೂ ಪರಿಚಯಿಸಿದ್ದರು. ಕೆಲಸಮಯ ಬಣ್ಣದ ಜಗತ್ತಿನಿಂದ ದೂರವಿದ್ದ ನಮಿತಾ 2016ರಲ್ಲಿ ಮೋಹನ್‌ಲಾಲ್ ನಾಯಕರಾಗಿದ್ದ ‘ಪುಲಿಮುರುಗನ್’ ಚಿತ್ರದ ಮೂಲಕ ಮತ್ತೆ ಮಿಂಚುಹರಿಸಿದ್ದರು. ಕಮಲ್ ಹಾಸನ್ ನಡೆಸಿಕೊಡುವ ‘ಬಿಗ್‌ಬಾಸ್’ ತಮಿಳು ಆವೃತ್ತಿ ಅವರ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿತ್ತು.

ತಮಿಳುನಾಡಿನ ಕೊಯಮತ್ತೂರು ಸಮೀಪ ಅಭಿಮಾನಿಗಳು ನಮಿತಾ ಅವರಿಗೆ ದೇಗುಲವನ್ನೇ ಕಟ್ಟಿಸಿದ್ದಾರೆ. ಖುಷ್ಬು ಹೊರತುಪಡಿಸಿದರೆ, ಈ ಪರಿ ಅಭಿಮಾನಿಗಳ ಒಲವು ಗಳಿಸಿದ ನಟಿ ನಮಿತಾ ಒಬ್ಬರೇ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು