ಐಸಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ

ಭಾನುವಾರ, ಮೇ 26, 2019
30 °C

ಐಸಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ

Published:
Updated:

ನವದೆಹಲಿ: ಸಿಐಎಸ್‌ಸಿಇಯು 2018–19ನೇ ಸಾಲಿನ 10ನೇ (ಐಸಿಎಸ್‌ಇ) ಮತ್ತು 12ನೇ(ಐಎಸ್‌ಸಿ) ತರಗತಿಗಳ ಫಲಿತಾಂಶ ಪ್ರಕಟಿಸಿದೆ. 

ಮಂಗಳವಾರ ಮಧ್ಯಾಹ್ನ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಸಿಐಎಸ್‌ಸಿಇಯ ಅಧಿಕೃತ ವೆಬ್‌ಸೈಟ್‌ www.cisce.org ನಲ್ಲಿ ಫಲಿತಾಂಶ ಲಭ್ಯ. 

ಐಎಸ್‌ಸಿಯ ಪರೀಕ್ಷೆಗಳು ಕಳೆದ ಫೆಬ್ರವರಿ 4ರಂದು ಆರಂಭಗೊಂಡು ಮಾರ್ಚ್‌ 25ರಂದು ಕೊನೆಗೊಂಡಿದ್ದವು. ಐಸಿಎಸ್‌ಇಯ ಪರೀಕ್ಷೆಗಳು ಫೆಬ್ರುವರಿ 22ರಂದು ಆರಂಭಗೊಂಡು ಮಾರ್ಚ್‌ 25ರಂದು ಮುಕ್ತಾಯಗೊಂಡಿದ್ದವು. 

ಐಸಿಎಸ್‌ಇ (10ನೇ ತರಗತಿ)ಯಲ್ಲಿ 98.54% ಫಲಿತಾಂಶ ಲಭ್ಯವಾಗಿದೆ. ಐಎಸ್‌ಸಿಯಲ್ಲಿ (12ನೇ ತರಗತಿ)  96.52%ರಷ್ಟು ಫಲಿತಾಂಶ ಸಿಕ್ಕಿದೆ. 

ಫಲಿತಾಂಶಗಳನ್ನು ಸಿಐಎಸ್‌ಸಿಇ ನೀಡಿರುವ ನಂಬರ್‌ಗಳಿಗೆ ಸಂದೇಶ ಕಳುಹಿಸುವ ಮೂಲಕವೂ ಪಡೆಯಬಹುದು. 

ಐಸಿಎಸ್‌ಇ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಿಂದ ICSE<Space><Unique Id>ಯನ್ನು 09248082883ಗೆ ಸಂದೇಶ ಕಳುಹಿಸಿ ಫಲಿತಾಂಶ ಪಡೆಯಬಹುದು. 

ಐಎಸ್‌ಸಿ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಿಂದ ISC<Space><Unique Id>ಯನ್ನು 09248082883ಗೆ ಸಂದೇಶ ಕಳುಹಿಸಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !