ಭಾನುವಾರ, ಜೂನ್ 7, 2020
22 °C

ವರ್ಗಾವಣೆ ರದ್ದು: ₹38 ಕೋಟಿ ಉಳಿತಾಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಎಲ್ಲ ವರ್ಗಾವಣೆಗಳನ್ನು ಮುಂದಿನ ವರ್ಷ ಮಾರ್ಚ್‌ 31ರವರೆಗೆ ಮುಂದೂಡಲಾಗಿದೆ. ಇದರಿಂದ, ಸಿಐಎಸ್‌ಎಫ್‌ಗೆ ₹38 ಕೋಟಿ ಉಳಿತಾಯವಾಗಲಿದೆ.

1.62 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ಸಿಐಎಸ್‌ಎಫ್‌, ಈ ವರ್ಷ ಸುಮಾರು 13 ಸಾವಿರ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಉದ್ದೇಶ ಹೊಂದಿತ್ತು. ಇವರೆಲ್ಲರಿಗೂ ವರ್ಗಾವಣೆ ಭತ್ಯೆ ನೀಡಬೇಕಾಗಿತ್ತು.

 ಕೋವಿಡ್‌–19 ಬಿಕ್ಕಟ್ಟು ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆಗಳನ್ನು ಮುಂದೂಡಲಾಗಿದೆ ಎಂದು ಸಿಐಎಸ್‌ಎಫ್‌ ಮಹಾನಿರ್ದೇಶಕ ರಾಜೇಶ್‌ ರಂಜನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು