ರಂಜನ್‌ ಗೊಗೋಯಿ ಮುಂದಿನ ಸಿಜೆಐ

7
ಅಕ್ಟೋಬರ್‌ 3ರಂದು ಅಧಿಕಾರ ಸ್ವೀಕಾರ

ರಂಜನ್‌ ಗೊಗೋಯಿ ಮುಂದಿನ ಸಿಜೆಐ

Published:
Updated:

ನವದೆಹಲಿ: ನಿರೀಕ್ಷೆಯಂತೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ಅವರು ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗುವುದು ಬಹುತೇಕ ಖಚಿತವಾಗಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಸೇವಾ ಹಿರಿತನ ಹೊಂದಿರುವ ಗೊಗೋಯಿ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.ಈ ಸಂಬಂಧ ಮಂಗಳವಾರ ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಮಿಶ್ರಾ ಅಕ್ಟೋಬರ್ 2ರಂದು ನಿವೃತ್ತರಾಗಲಿದ್ದು, ಅದರ ಮರುದಿನ ಅ.3ರಂದು ಗೊಗೋಯಿ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಮುಖ್ಯ ನ್ಯಾಯಮೂರ್ತಿ ನಿವೃತ್ತರಾಗುವ ಒಂದು ತಿಂಗಳ ಮೊದಲು ತಮ್ಮ ಉತ್ತರಾಧಿಕಾರಿಯ ಹೆಸರನ್ನು ಶಿಫಾರಸು ಮಾಡುವುದು ವಾಡಿಕೆ.

ಈ ಸಂಬಂಧ ಕೇಂದ್ರ ಕಾನೂನು ಸಚಿವಾಲಯ ಉತ್ತರಾಧಿಕಾರಿ ಹೆಸರನ್ನು ಶಿಫಾರಸು ಮಾಡುವಂತೆ ಕೋರಿ ಮಿಶ್ರಾ ಅವರಿಗೆ ಇತ್ತೀಚೆಗೆ ಪತ್ರ ಬರೆದಿತ್ತು.

ಈಶಾನ್ಯ ರಾಜ್ಯಗಳ ಯಾರೊಬ್ಬರು ಇದುವರೆಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿಲ್ಲ.

ಸಿಜೆಐ ಆಗಿ ಅಧಿಕಾರ ಸ್ವೀಕರಿಸಲಿರುವ ಈಶಾನ್ಯ ರಾಜ್ಯಗಳ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ರಂಜನ್‌ ಗೊಗೋಯಿ ಅವರ ಪಾಲಾಗಲಿದೆ.

1978ರಲ್ಲಿ ಗುವಾಹಟಿ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಗೊಗೋಯಿ ಅವರು ಮೃಧು ಸ್ವಭಾವದ ವ್ಯಕ್ತಿ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಕಾರ್ಯವೈಖರಿಯ ವಿರುದ್ಧ ಬಹಿರಂಗ ಬಂಡಾಯ ಸಾರಿದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪೈಕಿ ಇವರೂ ಒಬ್ಬರಾಗಿದ್ದರು.

ಜೆ.ಚೆಲಮೇಶ್ವರ್‌, ಮದನ್‌ ಬಿ. ಲೋಕೂರ್ ಮತ್ತು ಕುರಿಯನ್‌ ಜೋಸೆಫ್‌ ಮತ್ತು ರಂಜನ್‌ ಗೊಗೋಯಿ ಜನವರಿಯಲ್ಲಿ ಸಿಜೆಐ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದಿದ್ದರು.

ಇದರಿಂದಾಗಿ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶವನ್ನು ಅವರು ತಮ್ಮ ಕೈಯಾರೆ ತಪ್ಪಿಸಿಕೊಂಡರು ಎಂದು ಕಾನೂನು ವಲಯದಲ್ಲಿ ಚರ್ಚೆಯಾಗಿತ್ತು. ಆದರೆ, ಹಾಗಾಲಿಲ್ಲ.

 

 

 

 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !