ಬಹುಮತದಿಂದ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ: ಚುನಾವಣೋತ್ತರ ಸಮೀಕ್ಷೆ

ಸೋಮವಾರ, ಜೂನ್ 24, 2019
26 °C

ಬಹುಮತದಿಂದ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ: ಚುನಾವಣೋತ್ತರ ಸಮೀಕ್ಷೆ

Published:
Updated:

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೇರಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಭಾನುವಾರ ಪ್ರಕಟವಾದ ನಾಲ್ಕು ಚುನಾವಣೋತ್ತರ ಸಮೀಕ್ಷೆಗಳು ಮೋದಿಯೇ ಅಧಿಕಾರ ಮುಂದುವರಿಸಲಿದ್ದಾರೆ ಎಂದಿವೆ.

ಟೈಮ್ಸ್ ನೌ - ವಿಎಂಆರ್ ಸಮೀಕ್ಷೆ  ಪ್ರಕಾರ  542 ಸೀಟುಗಳಲ್ಲಿ ಎನ್‌ಡಿಎ  300 ಸೀಟು ಗಳಿಸಲಿದೆ. ರಿಪಬ್ಲಿಕ್ ಟಿವಿ - ಸಿವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ ನೇತತ್ವದ ಪಕ್ಷಗಳು  287  ಸೀಟುಗಳನ್ನು ಗೆಲ್ಲಲಿವೆ. ಅದೇ ವೇಳೆ ರಿಪಬ್ಲಿಕ್  -ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಎನ್‌ಡಿಎ 305 ಸೀಟು ಮತ್ತು ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ ಎನ್‌ಡಿಎ 282- 290 ಸೀಟುಗಳನ್ನು ಗಳಿಸಲಿದೆ.

ಕೇಂದ್ರದಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷ  ಅಥವಾ  ಮೈತ್ರಿಕೂಟಕ್ಕೆ 272 ಸೀಟುಗಳು ಬೇಕು.

2014ರಲ್ಲಿ  ಎನ್‌ಡಿಎ 336 ಸೀಟುಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರಿತ್ತು. ಮೋದಿ ನೇತೃತ್ವದ ಬಿಜೆಪಿ 282 ಸೀಟುಗಳನ್ನು ಗಳಿಸಿತ್ತು. ಏತನ್ಮಧ್ಯೆ, ಮೂರು ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ನೇತೃತ್ವದ ಯುಪಿಎಗೆ  124- 128 ಸೀಟುಗಳು ಲಭಿಸಲಿವೆ ಎಂದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !