ಸೋಮವಾರ, ಸೆಪ್ಟೆಂಬರ್ 27, 2021
21 °C
ಕೇಂದ್ರ ಬಂದರು ಸಚಿವ ಮನ್ಸುಖ್ ಮಾಂಡವೀಯ ಅವರಿಂದ ಚಾಲನೆ

‘ವರದ್’ ಕರಾವಳಿ ಕಾವಲು ನೌಕೆ ಲೋಕಾರ್ಪಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಭಾರತದ ಕಡಲಾಚೆಯ ರಕ್ಷಣೆಗಾಗಿ ನಿರ್ಮಿಸಿರುವ ಗಸ್ತು ನೌಕೆ ‘ವರದ್’ ಶುಕ್ರವಾರ ಇಲ್ಲಿ ಲೋಕಾರ್ಪಣೆಗೊಂಡಿತು. ಲಾರ್ಸನ್ ಅಂಡ್ ಟುಬ್ರೊ ಸಂಸ್ಥೆ ಇದನ್ನು ನಿರ್ಮಿಸಿದೆ.

ತೈಲ ಸೋರಿಕೆಯಂತಹ ಅವಘಡಗಳು, ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ತೊಂದರೆಯಾದಲ್ಲಿ ನೌಕೆಯು ರಕ್ಷಣೆಗೆ ಧಾವಿಸಲಿದೆ.

‘ವರದ್ ನೌಕೆಯು ಸೇವೆಗೆ ಸಮರ್ಪಣೆಯಾದ ಬಳಿಕ ಕರಾವಳಿ ಕಾವಲು ಪಡೆಯ ಸಾಮರ್ಥ್ಯ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಲಿದೆ’ ಎಂದು ಕೇಂದ್ರ ಬಂದರು ಸಚಿವ ಮನ್ಸುಖ್‌ ಮಾಂಡವೀಯ ಅವರು ಅಭಿಪ್ರಾಯಪಟ್ಟಿದ್ದಾರೆ. 

ನೌಕೆಯಲ್ಲಿ...

*ಸ್ವಯಂಚಾಲಿತ ಇಂಧನ ನಿರ್ವಹಣಾ ವ್ಯವಸ್ಥೆ, ನೌಕೆಯ ಹೊರ ಭಾಗದಲ್ಲಿ ಶಕ್ತಿಶಾಲಿ ಅಗ್ನಿಶಾಮಕ ವ್ಯವಸ್ಥೆ 

*30 ಎಂಎಂ ಮತ್ತು 12.7 ಎಂಎಂ ಬಂದೂಕುಗಳು

*ಶೋಧ, ರಕ್ಷಣಾ ಕಾರ್ಯಾಚರಣೆಗೆ ಬಳಸುವ 4 ಅತಿವೇಗದ ದೋಣಿಗಳು

ವೈಶಿಷ್ಟ್ಯಗಳು:

*ಬಹು ಹಂತದ ಕಾರ್ಯಾಚರಣೆ ಸಾಮರ್ಥ್ಯ

*ಎರಡು ಎಂಜಿನ್‌ಗಳ ಹೆಲಿಕಾಪ್ಟರ್ ಹೊತ್ತೊಯ್ಯುವ ಸಾಮರ್ಥ್ಯ

*ರಾತ್ರಿ ವೇಳೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ

*ದೇಶೀಯ ತಂತ್ರಜ್ಞಾನದ ಪಥದರ್ಶಕ ಮತ್ತು ಸಂವಹನ ಸಾಧನ

*ಕರಾವಳಿಯಲ್ಲಿ ಗಸ್ತು ತಿರುಗಲು ನಿಯೋಜಿಸುತ್ತಿರುವ ಸರಣಿಯ ಐದನೇ ನೌಕೆ ‘ವರದ್’

*ಉದ್ಘಾಟನೆಗೂ ಮುನ್ನ ವ್ಯಾಪಕ ಪ್ರಯೋಗಗಳಿಗೆ ಒಡ್ಡಿಕೊಂಡಿರುವ ವರದ್

*ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಅಳವಡಿಕೆಗೆ ಒಟ್ಟು ವೆಚ್ಚದ ಶೇ 90ರಷ್ಟು ಹಣ ವಿನಿಯೋಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು