ಪ್ರವಾಹ: ಕೊಚ್ಚಿನ್ ವಿಮಾನ ನಿಲ್ದಾಣ ಸ್ಥಗಿತ; 12 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

7

ಪ್ರವಾಹ: ಕೊಚ್ಚಿನ್ ವಿಮಾನ ನಿಲ್ದಾಣ ಸ್ಥಗಿತ; 12 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

Published:
Updated:
Deccan Herald

ಕೊಚ್ಚಿ: ಕೇರಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಈಗಲೇ 40 ಮಂದಿ ಸಾವಿಗೀಡಾಗಿದ್ದು, 5 ಮಂದಿ ಕಾಣೆಯಾಗಿದ್ದಾರೆ. 10 ಸಾವಿರ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.

ಕೊಚ್ಚಿನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಆಗಸ್ಟ್‌ 18ರ ಮಧ್ಯಾಹ್ನ 2 ಗಂಟೆಯ ವರೆಗೂ ಕೊಚ್ಚಿನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ತುಂಬಿರುವ ನೀರನ್ನು ಹೊರತೆಗೆಯಲು ಹಾಗೂ ಒಣಗಿಸಲು ಶ್ರಮಿಸುತ್ತಿರುವುದಾಗಿ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. 

ಮುಲ್ಲಪೆರಿಯಾರ್‌ ಅಣೆಕಟ್ಟೆಯಿಂದ ನೀರು ಹೊರಬಿಡಲಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರ 4 ಸಾವಿರ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಚೆರುಥೊನಿ ಅಣೆಕಟ್ಟೆಯಿಂದ ಸೆಕೆಂಡ್‌ಗೆ 8.5 ಲಕ್ಷ ಲೀಟರ್‌ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದ್ದು, ಮುಲ್ಲೈಪೆರಿಯಾರ್‌ ಡ್ಯಾಂನ ಎಲ್ಲ 13 ಗೇಟ್‌ಗಳಿಂದ ಸೆಕೆಂಡ್‌ಗೆ 2200 ಕ್ಯೂಸೆಕ್‌ ಪ್ರಮಾಣದ ನೀರು ಹೊರ ಬರಲಿದೆ. ರಾಜ್ಯದಾದ್ಯಂತ ಒಟ್ಟು 33 ಅಣೆಕಟ್ಟೆಗಳಿಂದ ನೀರು ಹೊರಬಿಡಲಾಗಿದೆ. 

14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ವಯನಾಡ್‌, ಕೋಯಿಕೋಡ್‌, ಕಣ್ಣೂರ್‌, ಕಾಸರಗೂಡು, ಮಲಪ್ಪುರಂ, ಪಾಲಕ್ಕಾಡ್‌, ಇಡುಕ್ಕಿ ಹಾಗೂ ಎರ್ನಾಕುಲಂನಲ್ಲಿ ಆಗಸ್ಟ್‌ 16ರ ವರೆಗೂ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. 

ಅನೇಕ ಭಾಗಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಿಂದಾಗಿ ಸೇತುಗಳು ಮುಳುಗಡೆಯಾಗಿವೆ ಹಾಗೂ ಕೊಚ್ಚಿ ಹೋಗಿದ್ದು ರೈಲ್ವೆ ಸಂಚಾರ ವ್ಯತ್ಯಯಗೊಂಡಿದೆ. ತಿರುವನಂತಪುರಂ–ಕನ್ಯಾಕುಮಾರಿ ಮಾರ್ಗ ಸೇರಿ ಹಲವು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 

ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಬಹುದಾಗಿ ಕೇರಳ ಮುಖ್ಯಮಂತ್ರಿ ಕಚೇರಿಯ ಟ್ವಿಟರ್‌ನಲ್ಲಿ ಪ್ರಕಟಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !