ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ: ದೂರು

Last Updated 24 ನವೆಂಬರ್ 2019, 19:55 IST
ಅಕ್ಷರ ಗಾತ್ರ

ಮುಜಾಫ್ಫರ್‌ನಗರ : ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ ಎಸಗಿರುವ ಹಾಗೂ ಇದನ್ನು ಆರೋಪಿಯ ಗೆಳೆಯರು ಚಿತ್ರೀಕರಿಸಿರುವ ಆಘಾತಕಾರಿ ಕೃತ್ಯ ಉತ್ತರಪ್ರದೇಶದ ಮುಜಾಫ್ಫರ್‌ನಗರದಲ್ಲಿ ಶನಿವಾರ ನಡೆದಿದೆ.

ಇಲ್ಲಿನ ನ್ಯೂ ಮಂಡಿ ಠಾಣೆಯ ಅಧಿಕಾರಿ ಸಂಜೀವ್‌ ಕುಮಾರ್‌ ಪ್ರಕಾರ, ‘24 ವರ್ಷದ ಬಿ.ಎಸ್‌ಸಿ ವಿದ್ಯಾರ್ಥಿನಿ ಕಾಲೇಜಿನಿಂದ ಮನೆಗೆ ತೆರಳುವಾಗ ಭೋಪಾ ರಸ್ತೆಯಲ್ಲಿ ಆರೋಪಿ ಸುಭೋದ್ ಅಪಹರಿಸಿದ್ದಾನೆ. ಕಾರಿನಲ್ಲಿ ಆಗ ಆತನ ಇಬ್ಬರು ಗೆಳೆಯರಿದ್ದರು’.

ವಿದ್ಯಾರ್ಥಿನಿ ಸಂಬಂಧಿ ನೀಡಿರುವ ದೂರಿನಲ್ಲಿ ‘ಕಾರಿನಲ್ಲಿ ಅಪಹರಿಸಿದ ಬಳಿಕ ಆರೋಪಿಗಳು ಅಮಲು ಬರುವ ಪದಾರ್ಥ ಸೇವಿಸಲು ವಿದ್ಯಾರ್ಥಿನಿಗೆ ಜೀವಬೆದರಿಕೆ ಒಡ್ಡಿದ್ದಾರೆ. ಬಳಿಕ ಸುಭೋದ್‌ ಕೃತ್ಯ ಎಸಗಿದ್ದು, ಗೆಳೆಯರು ಚಿತ್ರೀಕರಿಸಿದ್ದಾರೆ’ ಎಂದು ತಿಳಿಸಲಾಗಿದೆ.

ಕೆಲಹೊತ್ತಿನ ನಂತರ ಸಂತ್ರಸ್ತೆಯನ್ನು ಕಾಲೇಜಿನ ಹೊರಗೆ ಬಿಡಲಾಗಿದ್ದು, ಯಾರಿಗಾದರೂ ಈ ಬೆಳವಣಿಗೆ ಕುರಿತು ತಿಳಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಸಿದ್ದಾರೆ.

‘ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ. ಸುಬೋಧ್‌ ಈ ಹಿಂದೆ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದಾಗಿ ಪೋಷಕರು ಹಳ್ಳಿಯನ್ನು ಬಿಟ್ಟು ಮುಜಾಫ್ಫರ್‌ನಗರಕ್ಕೆ ವಲಸೆ ಬಂದಿದ್ದರು’ ಎಂದೂ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT