ಬುಧವಾರ, ಅಕ್ಟೋಬರ್ 16, 2019
28 °C

ಕಮರೊಸ್ ಅಭಿವೃದ್ಧಿಗೆ ಸಹಕಾರ: ವೆಂಕಯ್ಯ ನಾಯ್ಡು

Published:
Updated:
Prajavani

ಮೊರಾನಿ: ಕಮರೊಸ್ ರಾಷ್ಟ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶುಕ್ರವಾರ ಇಲ್ಲಿ ಹೇಳಿದರು.

ಕಮರೊಸ್ ಅಧ್ಯಕ್ಷ ಅಝಲಿ ಅಸೊಮನಿ ನೇತೃತ್ವದ ಸಚಿವರು, ಅಧಿಕಾರಿಗಳ ತಂಡದೊಂದಿಗೆ ಭಾರತದ ನಿಯೋಗ ನಡೆಸಿದ ಮಾತುಕತೆ ವೇಳೆ ನಾಯ್ಡು ಈ ಭರವಸೆ ನೀಡಿದರು.

ಉಭಯ ದೇಶಗಳ ಅಧಿಕಾರಿಗಳು ರಕ್ಷಣೆ, ಆರೋಗ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಹಕಾರ ನೀಡುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದರು.

ಇ-ಆರೋಗ್ಯಭಾರತಿ, ಇ-ವಿದ್ಯಾಭಾರತಿ ಕುರಿತೂ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಅಲ್ಪ ಅವಧಿಗೆ ಭೇಟಿ ನೀಡುವ ಎರಡೂ ರಾಷ್ಟ್ರಗಳ ನಾಗರಿಕರಿಗೆ ವೀಸಾ ವಿನಾಯಿತಿ ನೀಡುವ ಸಂಬಂಧ ನಿರ್ಧರಿಸಿದ್ದೇವೆ ಎಂದು ಉಪ ರಾಷ್ಟ್ರಪತಿ ತಿಳಿಸಿದರು.

ಭಾರತವು ಕಮರೊಸ್ ರಾಷ್ಟ್ರಕ್ಕೆ 10 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಔಷಧ, ಒಂದು ಸಾವಿರ ಟನ್ ಅಕ್ಕಿ, ಕಡಲು ಕಾವಲಿಗೆ ಬೇಕಾದ ದೋಣಿಗಳ ಖರೀದಿಗೆ ನೆರವು ನೀಡಲಿದೆ ಎಂದು ಅವರು ಹೇಳಿದರು.

ವೆಂಕಯ್ಯ ನಾಯ್ಡು ಅವರಿಗೆ ಅಝಲಿಯವರು ಕಮರೊಸ್ ದೇಶದ ಉನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್ ನೀಡಿ ಗೌರವಿಸಿದರು.

Post Comments (+)