ವಾಜಪೇಯಿ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸಿದ ವಿದೇಶಿ ನಾಯಕರು

7

ವಾಜಪೇಯಿ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸಿದ ವಿದೇಶಿ ನಾಯಕರು

Published:
Updated:

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ವಿಶ್ವದ ಹಲವು ನಾಯಕರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಮೆರಿಕದಿಂದ ಮಾಲ್ಡೀವ್ಸ್‌ವರೆಗೆ ಹಲವು ದೇಶಗಳಿಂದ ಸಂತಾಪ ಸಂದೇಶ ಬಂದಿದೆ.

ವಿಶ್ವದ ವಿವಿಧ ದೇಶಗಳಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಗಳಲ್ಲಿ ಶೋಕ ಸೂಚಕವಾಗಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿದೆ. 

‘ವಾಜಪೇಯಿ ಅವರು ಭಾರತ ಕಂಡ ಅತ್ಯುತ್ತಮ ನಾಯಕ. ಬ್ರಿಟನ್‌ನಲ್ಲಿ ಅವರನ್ನು ಶ್ರೇಷ್ಠ ರಾಜತಂತ್ರಜ್ಞ ಎಂದು ಗೌರವಿಸಲಾಗುತ್ತದೆ. ಅವರ ನಿಧನ ನಮಗೆಲ್ಲರಿಗೂ ನೋವು ತಂದಿದೆ’ ಎಂದು ಭಾರತದಲ್ಲಿರುವ ಬ್ರಿಟಿಷ್ ಹೈ ಕಮಿಷನರ್ ಡೊಮಿನಿಕ್ ಅಸ್‌ಖ್ವಿತ್ ಹೇಳಿದ್ದಾರೆ.

ಅಮೆರಿಕ ರಾಯಭಾರ ಕಚೇರಿಯು ಸಂತಾಪ ಸಂದೇಶದಲ್ಲಿ ‘ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಅಮೆರಿಕದೊಡನೆ ಭಾರತದ ಸಂಬಂಧ ಸುಧಾರಣೆಗೆ ಶ್ರಮಿಸಿದ್ದರು. ಅಮೆರಿಕವನ್ನು ಸಹಜ ಮಿತ್ರ ಎಂದು ಹೇಳುವ ಮೂಲಕ ಗೌರವಿಸಿದ್ದರು’ ಎಂದು ಹೇಳಿದೆ.

ಮಾಲ್ಡೀಲ್ಸ್‌ ರಾಯಭಾರ ಕಚೇರಿ ಹೊರಡಿಸಿರುವ ಸಂತಾಪ ಸಂದೇಶದಲ್ಲಿ ‘ವಾಜಪೇಯಿ ಅವರು ಅತ್ಯುತ್ತಮ ಮಾದರಿಯನ್ನು ಬಿಟ್ಟು ಹೋಗಿದ್ದಾರೆ’ ಎಂದು ಹೇಳಿದೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಮ್ಮ ಸಂದೇಶದಲ್ಲಿ ‘ವಾಜಪೇಯಿ ಅವರ ನಿಧನದಿಂದ ಆಘಾತವಾಗಿದೆ. ಬಾಂಗ್ಲಾ ಜನರಿಗೂ ಇದು ದುಃಖ ತಂದಿದೆ. ವಾಜಪೇಯಿ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಬಾಂಗ್ಲಾದೇಶ ಪ್ರಾರ್ಥಿಸುತ್ತದೆ’ ಎಂದು ಹೇಳಿದ್ದಾರೆ.

ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಸಂದೇಶದಲ್ಲಿ ‘ಪಾಕ್‌ ಜೊತೆಗೆ ಸಂಬಂಧ ಸುಧಾರಣೆಗೆ ವಾಜಪೇಯಿ ಶ್ರಮಿಸಿದ್ದರು. ಅವರೊಬ್ಬ ರಾಜತಾಂತ್ರಿಕ ನಿಪುಣ. ಸಾರ್ಕ್ ಮತ್ತು ಪ್ರಾದೇಶಿಕ ಸಹಕಾರವನ್ನು ಬೆಂಬಲಿಸಿದ್ದರು. ಪಾಕಿಸ್ತಾನದ ಜನತೆ ಮತ್ತು ಸರ್ಕಾರ ಈ ಸಂದರ್ಭದಲ್ಲಿ ಭಾರತದ ಜೊತೆಗೆ ಇದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !