ರಾಮಮಂದಿರಕ್ಕೆ ಕಾಂಗ್ರೆಸ್‌ನದ್ದೇ ತೊಡಕು: ಸಚಿವ ಶ್ರೀಕಾಂತ್ ಶರ್ಮಾ

7

ರಾಮಮಂದಿರಕ್ಕೆ ಕಾಂಗ್ರೆಸ್‌ನದ್ದೇ ತೊಡಕು: ಸಚಿವ ಶ್ರೀಕಾಂತ್ ಶರ್ಮಾ

Published:
Updated:

ಮಥುರಾ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ನದ್ದೇ ಅತ್ಯಂತ ದೊಡ್ಡ ತೊಡಕು. ಆ ಪಕ್ಷದ ಕಾರ್ಯಕರ್ತರು ರಾಮಮಂದಿರ ಮತ್ತು ರಾಮಸೇತುವನ್ನು ವಿರೋಧಿಸುತ್ತಾರೆ. ಗೋಹತ್ಯೆಯನ್ನು ಬೆಂಬಲಿಸುತ್ತಾರೆ’ ಎಂದು ಉತ್ತರ ಪ್ರದೇಶ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಆರೋಪಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹ ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

‘ಕಾಂಗ್ರೆಸ್‌ನ ಸಂಬಂಧ ಇರುವುದು ರಾಮನೊಂದಿಗೋ ಅಥವಾ ಬಾಬರ್‌ನೊಂದಿಗೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು. ಈ ದೇಶದ ಗೌರವ ಮತ್ತು ಸ್ವಾಭಿಮಾನದ ಬಗ್ಗೆ ಕಾಂಗ್ರೆಸ್‌ಗೆ ಎಳ್ಳಷ್ಟೂ ಗೊತ್ತಿಲ್ಲ. ದೇಶದ ಭದ್ರತೆ ಜತೆಗೆ ಸದಾ ಆಟವಾಡುವ ಕಾಂಗ್ರೆಸ್, ಈಗ ಮತ ಕೇಳಲು ಮಾತ್ರ ಜನರ ಮುಂದೆ ಬರುತ್ತಿದೆ’ ಎಂದು ಯೋಗಿ ಲೇವಡಿ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಬುದ್ಧನ ಪ್ರತಿಮೆ ಸ್ಥಾಪಿಸಲಿ: ‘ಹೈಕೋರ್ಟ್‌ನ ನಿರ್ದೇಶನದಂತೆ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಉತ್ಖನನ ನಡೆಸಲಾಗಿತ್ತು. ಆ ಸ್ಥಳದಲ್ಲಿ ಬುದ್ಧ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಅವಶೇಷಗಳೂ ಪತ್ತೆಯಾಗಿವೆ. ಹೀಗಾಗಿ ಆ ಸ್ಥಳದಲ್ಲಿ ಬುದ್ಧನ ಪ್ರತಿಮೆಯನ್ನೂ ಸ್ಥಾಪಿಸಬೇಕು’ ಎಂದು ಬಿಜೆಪಿಯ ದಲಿತ ನಾಯಕಿ ಮತ್ತು ಸಂಸದೆ ಸಾವಿತ್ರಿಭಾಯಿ ಫುಲೆ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !