ಕರ್ಮ ನಿಮಗಾಗಿ ಕಾಯುತ್ತಿದೆ: ರಾಜೀವ್‌ ಕುರಿತ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಕಿಡಿ

ಸೋಮವಾರ, ಮೇ 27, 2019
34 °C

ಕರ್ಮ ನಿಮಗಾಗಿ ಕಾಯುತ್ತಿದೆ: ರಾಜೀವ್‌ ಕುರಿತ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಕಿಡಿ

Published:
Updated:

ದೆಹಲಿ: ‘ರಾಜೀವ್‌ ಗಾಂಧಿ ನಂ. ಭ್ರಷ್ಟರಾಗಿ ಪ್ರಾಣ ಬಿಟ್ಟಿದ್ದರು,’ ಎಂಬ ನರೇಂದ್ರ ಮೋದಿ ಅವರ ಹೇಳಿಕೆಗೆ ಕಾಂಗ್ರೆಸ್‌ ವ್ಯಗ್ರ ಗೊಂಡಿದೆ. ‘ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ,’ ಎಂದು ರಾಹುಲ್‌ ಹೇಳಿದರೆ, ‘ವಂಚನೆಯನ್ನು ಜನ ಎಂದಿಗೂ ಮರೆಯುವುದಿಲ್ಲ,’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. 

ಉತ್ತರ ಪ್ರದೇಶದಲ್ಲಿ ಶನಿವಾರ ಚುನಾವಣಾ ಸಮಾವೇಶವೊಂದರಲ್ಲಿ ಭಾಗವಹಿಸಿದ್ದ ಮೋದಿ, ‘ನಿಮ್ಮ ತಂದೆಯನ್ನು ಮಿ.ಕ್ಲೀನ್‌ ಎಂದು ಕರೆಯಲಾಗುತ್ತದೆ. ಆದರೆ, ನಿಮ್ಮ ತಂದೆ ಸತ್ತಿದ್ದೇ ನಂ.1 ಭ್ರಷ್ಟಾಚಾರಿಯಾಗಿ,’ ಎಂದು ಮಾಜಿ ಪ್ರಧಾನಿ, ದಿವಂಗತ ರಾಜೀವ್‌ ಗಾಂಧಿ ಅವರನ್ನು ಉಲ್ಲೇಖಿಸುವ ಮೂಲಕ ರಾಹುಲ್‌ ಗಾಂಧಿ ಅವರನ್ನು ಕೆಣಕಿದ್ದರು. 

ಇದೇ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ ‘ಮೋದಿ ಜೀ, ಯುದ್ಧ ಅಂತ್ಯವಾಗಿದೆ. ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ. ನಿಮ್ಮ ಅಂತರಾಳ ನೀವು ಏನು ಎಂಬುದನ್ನು ತಿಳಿಸುತ್ತಿದೆ. ನಮ್ಮ ತಂದೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ. ಪ್ರೀತಿ ಮತ್ತು ಅಪ್ಪುಗೆಯೊಂದಿಗೆ, ರಾಹುಲ್‌’ ಎಂದು ಸಾತ್ವಿಕ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. 

‘ಹುತಾತ್ಮರ ಹೆಸರಲ್ಲಿ ಮತ ಕೇಳುವ ಈ ದೇಶದ ಪ್ರಧಾನ ಮಂತ್ರಿ, ಹುತಾತ್ಮರಾದ ಮತ್ತೊಬ್ಬ ಮೇರು ವ್ಯಕ್ತಿಯ ಬಗ್ಗೆ ಅವಹೇಳನ ಮಾಡಿದ್ದಾರೆ. ಅಮೇಥಿಯ ಜನ ಇದಕ್ಕೆ ಸೂಕ್ತವಾದ ಉತ್ತರ ಕೊಡುತ್ತಾರೆ. ರಾಜೀವ್‌ ಗಾಂಧಿ ಅವರು ಅಮೇಥಿಯ ಜನಕ್ಕಾಗಿ ಪ್ರಾಣ ಅರ್ಪಿಸಿದರು. ನರೇಂದ್ರ ಮೋದಿ ಅವರೇ ನನಪಿರಲಿ ಈ ದೇಶದ ಜನ ವಂಚನೆಯನ್ನು ಸಹಿಸುವುದಿಲ್ಲ,’ ಎಂದು ರಾಜೀವ್‌ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ಟ್ವೀಟ್‌ ಮೂಲಕ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 

‘ಮೃತ ವ್ಯಕ್ತಿಯನ್ನು ಅವಹೇಳನ ಮಾಡುವ ಮೂಲಕ ನರೇಂದ್ರ ಮೋದಿ ಅವರು ಪ್ರಾಮಾಣಿಕತೆ ಮತ್ತು ಸಭ್ಯತೆಯ ಎಲ್ಲ ಎಲ್ಲೆಗಳನ್ನೂ ಮೀರಿದ್ದಾರೆ,’ ಎಂದು ಕೇಂದ್ರದ ಮಾಜಿ ಸಚಿವ ಚಿದಂಬರಂಬ ಟೀಕಿಸಿದ್ದಾರೆ. 

‘ರಾಜೀವ್‌ ಗಾಂಧಿ ಅವರ ಬಗ್ಗೆ ಮೋದಿ ಆಡಿರುವ ಮಾತುಗಳು ನಮ್ಮನ್ನು ಗಾಸಿಗೊಳಿಸಿವೆ. ಸಾಮಾನ್ಯವಾಗಿ ಪ್ರಧಾನಿಯಾದವರು ದೇಶದ ಜನರ ಬಗ್ಗೆ ಅತ್ಯಂತ ಜವಾಬ್ದಾರಿಯುತವಾಗಿ ಮಾತನಾಡುತ್ತಾರೆ. ಅಸಂಬಂದ್ಧವಾಗಿ ಮಾತನಾಡಲಾರರು. ಆದರೆ, ಮೋದಿ ರಾಜೀವ್‌ ಗಾಂಧಿ ಅವರ ಕುರಿತ ಮಾತನಾಡಿದ್ದಾರೆ. ಅವರೇಕೆ ಹೀಗೆ ಮಾತನಾಡಿದರು. ಇದು ನಾಚಿಕ್ಕೇಡಿನ ಹೇಳಿಕೆ. ನಾನೂ ಕೂಡ ಗುಜರಾತಿನವನು. ಗಾಂಧಿ ನಾಡಿನಿಂದ ಬಂದವನು. ಈ ನಾಡಿನಿಂದ ಬಂದವರು ಹೀಗೆ ಮಾತನಾಡಬಲ್ಲರೇ ಎಂದು ನಮಗೆ ಬೇಸರವಾಗುತ್ತಿದೆ,’ ಎಂದು ಸಾಗರೋತ್ತರ ಕಾಂಗ್ರೆಸ್‌ನ ಮುಖ್ಯಸ್ಥ ಸ್ಯಾಮ್‌ ಪಿತ್ರೋಡಾ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 40

  Happy
 • 2

  Amused
 • 0

  Sad
 • 0

  Frustrated
 • 11

  Angry

Comments:

0 comments

Write the first review for this !