ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ವಿದ್ಯಾರ್ಥಿಗಳಿಗೆ 625 ಅಂಕ; ಶೇ 78.01 ವಿದ್ಯಾರ್ಥಿನಿಯರು ಪಾಸ್‌

Last Updated 7 ಮೇ 2018, 6:34 IST
ಅಕ್ಷರ ಗಾತ್ರ

ಬೆಂಗಳೂರು: 2017-18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದಿದ್ದಾರೆ. 

ಮೈಸೂರಿನ ಸದ್ವಿದ್ಯಾ ಹೈಸ್ಕೂಲ್‌ನ ಯಶಸ್‌.ಎಂ.ಎಸ್‌ ಹಾಗೂ ಬೆಂಗಳೂರಿನ ಹೋಲಿ ಟೈಲ್ಡ್‌ ಹೈಸ್ಕೂಲ್‌ನ ಸುದರ್ಶನ್‌ ಕೆ.ಎಸ್‌. 625ಕ್ಕೆ 625 ಅಂಕ ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ.

ಒಟ್ಟು ಎಂಟು ವಿದ್ಯಾರ್ಥಿಗಳು 624 ಅಂಕ ಹಾಗೂ 12 ವಿದ್ಯಾರ್ಥಿಗಳು 623 ಅಂಕ, 22 ವಿದ್ಯಾರ್ಥಿಗಳು 622 ಅಂಕ ಹಾಗೂ 35 ವಿದ್ಯಾರ್ಥಿಗಳು 621 ಅಂಕ ಗಳಿಸಿದ್ದಾರೆ.

ಫಲಿತಾಂಶ ಶೇ 4.06ರಷ್ಟು ಹೆಚ್ಚಳ

ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 8,38,088 ವಿದ್ಯಾರ್ಥಿಗಳ ಪೈಕಿ 6,02,802 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಈ ಬಾರಿ ಶೇ 71.93 ಫಲಿತಾಂಶ ಬಂದಿದೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಫಲಿತಾಂಶದಲ್ಲಿ ಶೇ 4.06ರಷ್ಟು ಏರಿಕೆಯಾಗಿದೆ.

ಉತ್ತೀರ್ಣರಾದ ಗಂಡು ಮಕ್ಕಳ ಪ್ರಮಾಣ ಶೇ 66.56(ಶೇ 3.95 ಏರಿಕೆ), ಉತ್ತೀರ್ಣರಾದ ವಿದ್ಯಾರ್ಥಿನಿಯರು ಶೇ 78.01(ಶೇ 3.76 ಏರಿಕೆ). ನಗರ ಭಾಗಕ್ಕಿಂತಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ 4.62ರಷ್ಟು ಹೆಚ್ಚಿದೆ. ನಗರ ಭಾಗದ ವಿದ್ಯಾರ್ಥಿಗಳು ಶೇ 69.38 ಹಾಗೂ ಗ್ರಾಮೀಣ ಭಾಗದ ಶೇ 74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT