ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಂಕೆ–ಕಾಂಗ್ರೆಸ್ ಸೀಟು ಹೊಂದಾಣಿಕೆ

Last Updated 20 ಫೆಬ್ರುವರಿ 2019, 20:36 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆ ಬಿಜೆಪಿ ಸೀಟು ಹೊಂದಾಣಿಕೆ ಪ್ರಕಟಿಸಿದ ಮರುದಿನವೇ ಕಾಂಗ್ರೆಸ್ ಪಕ್ಷವು ಡಿಎಂಕೆ ಜತೆಗಿನ ಮೈತ್ರಿಯನ್ನು ಪ್ರಕಟಿಸಿದೆ.

39 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 9 ಕಡೆ ಸ್ಪರ್ಧಿಸಲಿದೆ. 20ರಿಂದ 25 ಕ್ಷೇತ್ರಗಳಲ್ಲಿ ಡಿಎಂಕೆ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದು, ಉಳಿದ ಸ್ಥಾನಗಳಲ್ಲಿ ಮೈತ್ರಿಕೂಟದ ಸಣ್ಣಪುಟ್ಟ ಪಕ್ಷಗಳು ಅಭ್ಯರ್ಥಿಗಳನ್ನು ಹಾಕಲಿವೆ.ಪುದುಚೇರಿಯ ಒಂದು ಕಡೆ ಕಾಂಗ್ರೆಸ್ ಕಣಕ್ಕೆ ಇಳಿಯಲಿದೆ.

ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಜೊತೆಗಿನ ಸೀಟು ಹೊಂದಾಣಿಕೆಯನ್ನು ಕಾಂಗ್ರೆಸ್ ಮುಖಂಡ ಮುಕುಲ್ ವಾಸ್ನಿಕ್ ಅವರು ಬುಧವಾರ ಇಲ್ಲಿ ಅಂತಿಮಗೊಳಿಸಿದರು.

2014ರಲ್ಲಿ ಅಂದಿನ ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷವು 37 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಬಿಜೆಪಿ ಹಾಗೂ ವಿಸಿಕೆ ಪಕ್ಷಗಳು ತಲಾ ಒಂದು ಸ್ಥಾನ ಪಡೆದಿದ್ದವು. ಡಿಎಂಕೆ ಹಾಗೂ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿತ್ತು.

ಜಯಲಲಿತಾ ಅವರ ನಿಧನದ ಬಳಿಕ ಆಡಳಿತಾರೂಢ ಪಕ್ಷದ ಸ್ಥಿತಿ ಬದಲಾಗಿದೆ. ಆಡಳಿತ ನಡೆಸಲು ಪಕ್ಷ ಹೆಣಗಾಡುತ್ತಿದೆ. ಹಲವು ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದು, ಈ ಲೋಪಗಳು ಡಿಎಂಕೆಗೆ ಲಾಭ ತಂದುಕೊಡಲಿವೆ ಎಂಬ ವಿಶ್ವಾಸದಲ್ಲಿ ಸ್ಟಾಲಿನ್ ಪಕ್ಷ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT