ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರ: ಸರ್ಕಾರ ರಚನೆಗೆ ಕಾಂಗ್ರೆಸ್, ಪಿಡಿಪಿ, ಎನ್‌ಸಿ ಕಸರತ್ತು

Last Updated 21 ನವೆಂಬರ್ 2018, 12:59 IST
ಅಕ್ಷರ ಗಾತ್ರ

ಶ್ರೀನಗರ: ಕಳೆದ ಒಂದು ದಶಕದಲ್ಲಿ ನಾಲ್ಕನೇ ಬಾರಿಗೆ ರಾಜ್ಯಪಾಲರ ಆಳ್ವಿಕೆಗೆಒಳಗಾಗಿರುವಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಕುರಿತು ಕಾಂಗ್ರೆಸ್‌ ಹಾಗೂ ಪ್ರಾದೇಶಿಕ ಪಕ್ಷಗಳು ಮಾತುಕತೆ ನಡೆಸಿವೆ. ಈ ಬಗ್ಗೆ ಕಾಂಗ್ರೆಸ್‌ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಮಾಹಿತಿ ನೀಡಿದ್ದಾರೆ.

‘ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸುವ ಸಂಬಂಧಕಾಂಗ್ರೆಸ್‌, ಪೀಪಲ್ಸ್‌ ಡೆಮಾ­ಕ್ರಟಿಕ್‌ ಪಕ್ಷ(ಪಿಡಿಪಿ)ನ್ಯಾಷನಲ್‌ ಕಾನ್ಫರೆನ್ಸ್‌(ಎನ್‌ಸಿ) ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದು, ಈಸಂಬಂಧ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಸಭೆಯೊಂದರಲ್ಲಿ ಹೇಳಿದ್ದಾರೆ.

ಜಮ್ಮು ಕಾಶ್ಮೀರ ವಿಧಾನಸಭೆಯು89(ಇಬ್ಬರು ನಾಮನಿರ್ದೇಶಿತ ಸದಸ್ಯರು ಸೇರಿ)ಸದಸ್ಯ ಬಲ ಹೊಂದಿದ್ದು, ಸರ್ಕಾರ ರಚಿಸಲು ಶಾಸಕರ ಬೆಂಬಲ ಅಗತ್ಯ. ಸದ್ಯಪಿಡಿಪಿ(28), ಎನ್‌ಸಿ(15), ಕಾಂಗ್ರೆಸ್‌(12) ಪಕ್ಷಗಳು ಒಟ್ಟು 55 ಶಾಸಕರನ್ನು ಹೊಂದಿವೆ.

ಒಂದು ವೇಳೆ ಈ ಮೈತ್ರಿ ಮಾತುಕತೆಯು ಯಶಸ್ವಿಯಾದರೆ, ಸಾಂಪ್ರದಾಯಿಕ ಎದುರಾಳಿಗಳಾಗಿರುವ ಪಿಡಿಪಿ ಮತ್ತು ಎನ್‌ಸಿ ಪಕ್ಷಗಳು ಇದೇ ಮೊದಲ ಬಾರಿಗೆಸರ್ಕಾರದ ಭಾಗವಾಗಿ ಕಾಣಿಸಿಕೊಳ್ಳಲಿವೆ.

ಪಿಡಿಪಿಗೆ ನೀಡಿದ್ದ ಬೆಂಬಲವನ್ನುಕಳೆದ ಜೂನ್‌ನಲ್ಲಿ ಬಿಜೆಪಿಯು ಹಿಂಪಡೆದಿತ್ತು. ಮೆಹಬೂಬಾ ಮುಫ್ತಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಬಳಿಕ ಕಣಿವೆ ರಾಜ್ಯವನ್ನು ರಾಜ್ಯಪಾಲರ ಆಡಳಿತಕ್ಕೆ ಒಳಪಡಿಸಲಾಗಿದ್ದು, ಇದರೊಂದಿಗೆ ಎಂಟನೇ ಸಲ ರಾಜ್ಯಪಾಲರ ಆಡಳಿತ ಜಾರಿಯಾದಂತಾಗಿದೆ. ಸದ್ಯರಾಜ್ಯಪಾಲರ ಎನ್‌.ಎನ್‌. ವೊಹ್ರಾ ಕಣಿವೆ ರಾಜ್ಯದ ಉಸ್ತುವಾರಿ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT