ಕಾಂಗ್ರೆಸ್‌ಗೆ ₹ 170 ಕೋಟಿ ಕಪ್ಪು ಹಣದ ಹರಿವು: ಶೋಕಾಸ್ ನೋಟಿಸ್ ಜಾರಿ ಮಾಡಿದ ಐಟಿ

ನವದೆಹಲಿ: ಹೈದರಾಬಾದ್ ಮೂಲದ ಸಂಸ್ಥೆಯೊಂದರಿಂದ ಪಕ್ಷದ ಬೊಕ್ಕಸಕ್ಕೆ ಹರಿದುಬಂದಿದೆ ಎನ್ನಲಾದ ಹಣಕ್ಕೆ ಸಂಬಂಧಿಸಿದಂತೆ ದಾಖಲೆ ಒದಗಿಸಲು ವಿಫಲವಾದ ಕಾಂಗ್ರೆಸ್‌ಗೆ ಆದಾಯ ತೆರಿಗೆ ಇಲಾಖೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ನವೆಂಬರ್ 4ರಂದು ದಾಖಲೆಗಳನ್ನು ಒದಗಿಸುವಂತೆ ಕಾಂಗ್ರೆಸ್‌ನ ಹಿರಿಯ ಪದಾಧಿಕಾರಿಗಳಿಗೆ ಐಟಿ ಇಲಾಖೆಯಿಂದ ಸಮನ್ಸ್ ಜಾರಿಯಾಗಿತ್ತು. ಆದರೆ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದರು.
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ವೇಳೆ ಹೈದರಾಬಾದ್ ಮೂಲದ ಮೂಲಸೌಕರ್ಯ ಸಂಸ್ಥೆಯು ಹವಾಲಾ ಮಾರ್ಗದ ಮೂಲಕ ಕಾಂಗ್ರೆಸ್‌ಗೆ 170 ಕೋಟಿ ಹಣವನ್ನು ವರ್ಗಾಯಿಸಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು.
ಈ ಹಣವನ್ನು ಸರ್ಕಾರಿ ಯೋಜನೆಗಳಲ್ಲಿ ನಕಲಿ ಬಿಲ್‌ಗಳನ್ನು ಮಾಡುವ ಮೂಲಕ ನೀಡಲಾಗಿದೆ ಎನ್ನುವ ಅಂಶ ಹೊರಬಿದ್ದಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಕಂಪನಿಗೆ ಸರ್ಕಾರವು ನಿಗಧಿಪಡಿಸಿದ್ದ ಯೋಜನೆಗಳಲ್ಲಿ ಹೆಚ್ಚಾಗಿ ನಕಲಿ ಬಿಲ್‌ಗಳನ್ನು ಮಾಡಲಾಗಿದೆ ಎನ್ನುವ ವಿಚಾರವು ಆದಾಯ ತೆರಿಗೆ ಇಲಾಖೆಗೆ ದೊರಕಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.